ಅಂಬಾನಿ ಮಗನ ಮದುವೆಗೆ ಹೊರಟ ಯಶ್‌, ಹೇಗಿದೆ ನೋಡಿ ಹೊಸ ಲುಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಮೂರು ದಿನ ನಡೆಯುತ್ತಿರುವ ದುಬಾರಿ ಅಂಬಾನಿಸ್‌ ಮದುವೆಯಲ್ಲಿ ಕನ್ನಡದ ನಟ ಯಶ್‌ ಭಾಗಿಯಾಗಿದ್ದಾರೆ.

ನಟ ಯಶ್ ಅವರು ‘ಕೆಜಿಎಫ್ 2’ ಬಳಿಕ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಭರ್ಜರಿ ನಿರೀಕ್ಷೆ ಇದೆ. ಅವರು ಈ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ ಎನ್ನಲಾಗಿದೆ. ಯಶ್ ಅವರಿಗೂ ಮುಕೇಶ್ ಅಂಬಾನಿ ಮಗನ ಮದುವೆಗೆ ಆಮಂತ್ರಣ ಸಿಕ್ಕಿದೆ. ಹೀಗಾಗಿ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆ ಕಾರ್ಯಕ್ರಮಕ್ಕೆ ಯಶ್ ತೆರಳಿದ್ದಾರೆ. ಈ ವೇಳೆ ಅವರ ‘ಟಾಕ್ಸಿಕ್’ ಸಿನಿಮಾ ಲುಕ್ ರಿವೀಲ್ ಆಗಿದೆ. ಹೊಸ ಹೇರ್​ಸ್ಟೈಲ್​ನಲ್ಲಿ ಯಶ್ ಗಮನ ಸೆಳೆದಿದ್ದಾರೆ.

ಯಶ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ದೇಶ-ವಿದೇಶದಲ್ಲಿ ಅವರಿಗೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾಗಳು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವು ಕಂಡಿತು. ಈ ಕಾರಣದಿಂದಲೇ ಯಶ್ ಅವರ ಜನಪ್ರಿಯತೆ ಹೆಚ್ಚಿತು. ಈ ಸಿನಿಮಾದಲ್ಲಿ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟುಕೊಂಡು ಯಶ್ ಗಮನ ಸೆಳೆದಿದ್ದರು. ಈಗ ಅವರು ಹೊಸ ಚಿತ್ರಕ್ಕಾಗಿ ಸ್ಟೈಲ್ ಬದಲಿಸಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!