ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಯಾವುದೇ ಸಮಸ್ಯೆ ಬಂದರೆ ಪರಿಹರಿಸಲು ಬಂಧುಗಳು ಮತ್ತು ಸ್ನೇಹಿತರಿದ್ದಾರೆ. ಹಿರಿಯರ ಹಿತವಚನಕ್ಕೆ ಕಿವಿಗೊಡಿ. ದುಡುಕಿನ ನಿರ್ಧಾರ ಬೇಡ.
ವೃಷಭ
ವೃತ್ತಿ ಕ್ಷೇತ್ರದಲ್ಲಿನ ಬೆಳವಣಿಗೆ ನಿಮಗೆ ಅಸಹನೆ, ಅತೃಪ್ತಿ ಮೂಡಿಸುವುದು. ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಿ.
ಮಿಥುನ
ಕೆಲಸಕ್ಕೆ ಅಡೆತಡೆಗಳು ಒದಗಿದರೂ ಅದನ್ನು ನಿಭಾಯಿಸುವಿರಿ. ಸೂಕ್ತ ನೆರವೂ ಲಭಿಸುವುದು. ಕುಟುಂಬಸ್ಥರಿಂದ ಮನಸ್ಸಿಗೆ ನೆಮ್ಮದಿ. ಬಂಧು ಭೇಟಿ.
ಕಟಕ
ಭಾವುಕರಾಗಿ ವರ್ತಿಸುವಿರಿ. ಮುಂಜಾನೆ ಉದಾಸ ಭಾವದಿಂದ ಆರಂಭವಾದರೂ ಸಂಜೆ ವೇಳೆಗೆ ಉಲ್ಲಸಿತ ಮನಸ್ಥಿತಿ.
ಸಿಂಹ
ಸಂತೋಷದ ಮತ್ತು ನಿರಾಳ ದಿನ. ಯಾವುದೇ ಸಮಸ್ಯೆ, ಅಡ್ಡಿಗಳು ಕಾಡಲಾರವು. ಎಲ್ಲವೂ ಸುಸೂತ್ರವಾಗಿ ಸಾಗುವುದು. ಗುರಿ ಯೊಂದು ಈಡೇರಿಕೆ.
ಕನ್ಯಾ
ಇತರರ ಅನುಚಿತ ಕಾರ್ಯವು ನಿಮ್ಮ ಮೇಲೆ ಪರಿಣಾಮ ಬೀರಬಲ್ಲುದು. ಅವರ ಸಂಗದಿಂದ ದೂರ ಉಳಿಯುವುದೇ ನಿಮಗೆ ಹಿತಕರ.
ತುಲಾ
ಸಣ್ಣ ಸಮಸ್ಯೆಗಳೂ ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ಏಕಾಗ್ರಚಿತ್ತತೆ ನಾಶವಾದೀತು. ನಡೆನುಡಿಯಲ್ಲಿ ಸಂಯಮವಿರಲಿ.
ವೃಶ್ಚಿಕ
ಇಂದು ಸಫಲ ದಿನ. ಯಾವುದೇ ಕಾರ್ಯ ವಾದರೂ ಸಫಲಗೊಳ್ಳುವುದು. ಬಾಂಧವ್ಯದಲ್ಲಿ ಹೊಸ ಬೆಳವಣಿಗೆ. ಆಪ್ತರಿಂದ ಮನಸ್ಸಿಗೆ ಖುಷಿ.
ಧನು
ಭವಿಷ್ಯದ ಬಗ್ಗೆ ಸರಿಯಾಗಿ ಯೋಜನೆ ರೂಪಿಸಲು ಸಕಾಲ. ಮನೆಯಲ್ಲಿನ ವಿವಾದಗಳನ್ನು ಮಾತುಕತೆಯಿಂದ ಪರಿಹರಿಸಿರಿ.ಘಿ
ಮಕರ
ಉದಾಸೀನತೆ, ಉತ್ಸಾಹರಾಹಿತ್ಯ. ಖಾಸಗಿ ಬದುಕಿನಲ್ಲಿ ಅಹಿತ ಬೆಳವಣಿಗೆ. ಭಾವನೆಗಳ ತಾಕಲಾಟ. ಶಾಂತಿಯಿಂದ ಕೂತು ಸಮಾಧಾನಪಡಿ.
ಕುಂಭ
ಖಾಸಗಿ ಬದುಕಿನಲ್ಲಿ ಸಮಸ್ಯೆ. ಆಪ್ತರೊಂದಿಗೆ ಸಾಮರಸ್ಯ ಹಾಳಾ ದೀತು. ವಿಫಲತೆ
ಯನ್ನು ದೃಢವಾಗಿ ಎದುರಿಸಿರಿ. ಧೃತಿ ಗೆಡುವುದು ಬೇಡ.
ಮೀನ
ಪ್ರಮುಖ ನಿರ್ಧಾರ ತಾಳುವ ಮುನ್ನ ಸರಿಯಾಗಿ ವಿವೇಚಿಸಿ. ಆತುರದ ತೀರ್ಮಾನ ಸಲ್ಲದು. ಆಪ್ತರ ಜತೆ ಸಮಾಲೋಚನೆ ನಡೆಸುವುದೊಳಿತು.