ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ವೃತ್ತಿಯಲ್ಲಿ ಅತ್ಯಂತ ಸಫಲ ಮತ್ತು ಸುಗಮ ದಿನ. ನಿಮ್ಮ ನಾಯಕತ್ವ ಗುಣವು ಬೆಳಕಿಗೆ ಬರುವುದು. ಉದ್ದೇಶಿತ ಗುರಿ ಸಾಧನೆ. ಕೌಟುಂಬಿಕ ಸಹಕಾರ.
ವೃಷಭ
ನಿಮ್ಮ ಬದುಕಿಂದು ತಿರುವು ದೊರಕೀತು. ಸಂಬಂಧಗಳು ಆದ್ಯತೆಯ ವಿಷಯವಾಗುವುದು.ಆರ್ಥಿಕ ಲಾಭ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ.
ಮಿಥುನ
ಆರ್ಥಿಕವಾಗಿ ನಿಮಗೆ ಅನುಕೂಲಕರ ದಿನ. ವ್ಯವಹಾರದಲ್ಲಿ ಲಾಭ. ಆದರೆ ನಿಮ್ಮ ಆಪ್ತರೇ ನಿಮ್ಮ ವಿರುದ್ಧ ಕಾರ್ಯಾಚರಿಸುವ ಸಾಧ್ಯತೆಯಿದೆ.
ಕಟಕ
ವೃತ್ತಿಯಲ್ಲಿ , ವ್ಯವಹಾರದಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು. ಆದರೆ ಕೌಟುಂಬಿಕ ಪರಿಸ್ಥಿತಿ ಸಮಸ್ಯೆ ಮತ್ತು ಒತ್ತಡ ಸೃಷ್ಟಿಸೀತು.
ಸಿಂಹ
ನಿಮ್ಮ ಸ್ನೇಹ ಬಳಗ ದೊಡ್ಡದು. ಹಾಗಾಗಿ ಸಮಸ್ಯೆ ಬಂದರೂ ಅವರಿಂದ ನೆರವು ಸಿಗುವುದು. ಇಂದು ಅಂತಹ ನೆರವು ಪಡೆಯುವ ಸಮಯ.
ಕನ್ಯಾ
ಹಣಕ್ಕೆ ಸಂಬಂಧಿಸಿದ ಗೊಂದಲಗಳನ್ನು ಸರಿಪಡಿಸಿಕೊಳ್ಳಲು ಆದ್ಯತೆ ಕೊಡಿ. ಅದನ್ನು ಹಾಗೇ ಮುಂದುವರಿಯಲು ಬಿಡಬೇಡಿ.
ತುಲಾ
ನಿಮ್ಮನ್ನು ಇಂದು ಯಾರೂ ಮಣಿಸ ಲಾರರು. ವಾದ, ಉದ್ದಿಮೆ, ಕ್ರೀಡೆ ಯಾವುದರಲ್ಲೂ ನೀವೇ ಗೆಲ್ಲುವಿರಿ. ಈ ದಿನ ಅತ್ಯಂತ ಸಫಲ ದಿನ.
ವೃಶ್ಚಿಕ
ಇತರರಿಂದ ಇಂದು ನೀವು ಉಪಯುಕ್ತ ಪಾಠ ಕಲಿಯುವಿರಿ. ಅದು ಕುಟುಂಬದಲ್ಲಾಗಬಹುದು, ವೃತ್ತಿಯಲ್ಲಾಗಬಹುದು. ನಿಮ್ಮದೇ ನಿಲುವಿಗೆ ಅಂಟಿಕೊಳ್ಳದಿರಿ.
ನಿಮ್ಮ ಉತ್ತಮ ಯೋಜನೆಯೂ ಇಂದು ವಿಫಲವಾದೀತು. ಹಾಗಾಗಿ ಅತಿಯಾದ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಬೇಡಿ. ಸಂಯಮವಿರಲಿ.
ಮಕರ
ಚಿಂತೆ, ಸಮಸ್ಯೆ, ಕಷ್ಟ ಇಲ್ಲದ ನಿರಾಳ ದಿನ. ಹಾಗೆಂದು ಒಂದೇ ದಿನ ಎಲ್ಲಾ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಎಲ್ಲವೂ ಅಪೂರ್ಣ ವಾಗಿ ಉಳಿದೀತು.
ಕುಂಭ
ಪ್ರೀತಿಪಾತ್ರರ ಜತೆಹೆಚ್ಚು ಕಾಲ ಕಳೆಯು ವಿರಿ. ನಿಮ್ಮ ಆಸಕ್ತಿಯ ವಿಷಯದಲ್ಲಿ ಗಮ ನಾರ್ಹ ಸಾಧನೆ. ನಿಮ್ಮ ಮೆಚ್ಚುಗೆ ಪಡೆಯಲು ಕೆಲವರ ಯತ್ನ.
ಮೀನ
ದೇವರ ಮಂದಿರ ಭೇಟಿ ಸಂಭವ. ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೂ ಮನಸ್ಸಿಗೆ ನೆಮ್ಮದಿ ಸಿಗಬಹುದು. ಖರ್ಚು ನಿಯಂತ್ರಿಸಿ.