ದಿನಭವಿಷ್ಯ | ಇಂದು ಎಲ್ಲವೂ ನಿಮ್ಮ ಪರವಾಗಿ ಸಾಗುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ನಿಮ್ಮ ಮಾನಸಿಕ ದೃಢತೆ ಸಮಸ್ಯೆ ನಿವಾರಣೆಗೆ ನೆರವು ನೀಡುವುದು. ಮನೆಯಲ್ಲಿ ಶಾಂತಿ, ಸಾಮರಸ್ಯ. ಹಣಕಾಸು ವಿಚಾರದ ಬಗ್ಗೆ ಪರಾಮರ್ಶೆ.

ವೃಷಭ
ಯಾವುದೇ ಸವಾಲು ಎದುರಿಸಬಲ್ಲ ಮನೋ ಬಲ ಪ್ರದರ್ಶಿಸುವಿರಿ. ಅದರಲ್ಲೆ ನಿಮ್ಮ ಯಶಸ್ಸೂ ಅಡಗಿದೆ. ಮನಶ್ಶಾಂತಿ. ಆರ್ಥಿಕ ಲಾಭ.

ಮಿಥುನ
ಕೆಲವು ಬೆಳವಣಿಗೆ ನಿಮ್ಮ ಆತ್ಮವಿಶ್ವಾಸ ಕುಂದಿಸುವುದು. ನಿಜವಾಗಿ ನೀವು ಹೆದರಬೇಕಿಲ್ಲ, ಎಲ್ಲವೂ ನಿಮ್ಮ ಪರವಾಗಿ ಸಾಗುವುದು.

ಕಟಕ
ಸಣ್ಣಪುಟ್ಟ ಸಂಘರ್ಷ ತಪ್ಪಿಸಿ. ಇಲ್ಲವಾದರೆ ನಿಮ್ಮ ಮನಶ್ಯಾಂತಿ ಹಾಳು. ನಿಮ್ಮ ಸುತ್ತಲಿನ ವ್ಯಕ್ತಿಗಳು ನಿಮಗೆ ಅಸಹನೆ ತರುವ ರೀತಿ ವರ್ತಿಸುತ್ತಾರೆ.

ಸಿಂಹ
ನಿಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿ ಕೊಳ್ಳು ವುದೇನೋ ಸರಿ. ಆದರೆ ಇದರಿಂದ ಮನೆಯಲ್ಲಿ ಸಾಮರಸ್ಯ ಹಾಳಾದೀತು. ಹೊಂದಾಣಿಕೆ ಒಳಿತು.

ಕನ್ಯಾ
ನಿಮ್ಮ ಅಭಿಪ್ರಾಯ ವನ್ನು ಸ್ಪಷ್ಟವಾಗಿ ತಿಳಿಸಿ. ಇತರರ ಮನಸ್ಸು ನೋಯುವುದೆಂಬ ಭಯ, ಹಿಂಜರಿಕೆ ಬಿಡಿ. ಆರ್ಥಿಕವಾಗಿ ಸಂಕಷ್ಟಎದುರಾದೀತು.

ತುಲಾ
ಸಮಸ್ಯೆಯೊಂದು ಮನದ ನೆಮ್ಮದಿ ಕೆಡಿಸುವುದು. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾರದ ಸಂಕಷ್ಟ. ತುಸು ಕಾಲ ಇದೇ ಸ್ಥಿತಿ ಇರಲಿದೆ.

ವೃಶ್ಚಿಕ
ಕೆಲವು ಸಂಬಂಧಗಳಲ್ಲಿ ಸಮಸ್ಯೆ ತೋರುವುದು. ಅದು ಉಲ್ಬಣಗೊಳ್ಳಲು ಅವಕಾಶ ಕೊಡದಿರಿ. ನೀವು ಹೊಂದಾಣಿಕೆಗೆ ಮುಂದಾಗಬೇಕು. ಸಂಘರ್ಷ ಒಳಿತಲ್ಲ.

ಧನು
ಫಲಪ್ರದ ದಿನವಲ್ಲ. ನಿಮ್ಮ ಕಾರ್ಯ ಭಾಗಶಃ ನೆರವೇರುವುದು. ಕೆಲವು ಕಾರ್ಯ ಅಪೂರ್ಣ. ದೇವರು, ಧ್ಯಾನದ ಕಡೆಗೆ ಮನಸ್ಸು ಹರಿಯುವುದು.

ಮಕರ
ಕೆಲಸದ ಒತ್ತಡದಿಂದ ಕುಟುಂಬವನ್ನು ಅವಗಣಿಸಬೇಡಿ. ಕುಟುಂಬಸ್ಥರ ಬೇಕುಬೇಡಗಳಿಗೆ ಗಮನ ಕೊಡಿ. ಆರ್ಥಿಕ ಮುಗ್ಗಟ್ಟು ಸಂಭವ.

ಕುಂಭ
ನಿಗದಿತ ಸಮಯ ದೊಳಗೆ ಕೆಲಸ ಮುಗಿಸ ಬೇಕಾದ ಒತ್ತಡಕ್ಕೆ ಸಿಲುಕುವಿರಿ. ಇತರರ ಸಹಕಾರ ದೊರಕದು. ಮನೆಯಲ್ಲಿ ಅಸಮಾಧಾನ.

ಮೀನ
ಕೆರಿಯರ್‌ನಲ್ಲಿ ಪ್ರಗತಿ. ಆರ್ಥಿಕ ಸ್ಥಿತಿ ಸುಧಾರಣೆ. ಆರೋಗ್ಯದಲ್ಲಿ ಹಿನ್ನಡೆ. ವಾಹನ ಚಲಾವಣೆಯಲ್ಲಿ ಎಚ್ಚರ ವಹಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!