ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ನಿಮ್ಮ ಸಾಮರ್ಥ್ಯದ ಕುರಿತು ನಿಮಗೇ ಅಪಂಬಿಕೆ ಬಿಟ್ಟುಬಿಡಿ. ನಿಮ್ಮಿಂದ ಎಲ್ಲವೂ ಸಾಧ್ಯವಾಗಲಿದೆ. ಇತರರ ಶ್ಲಾಘನೆ ಪಡೆಯುವಿರಿ. ಕೌಟುಂಬಿಕ ಶಾಂತಿ.
ವೃಷಭ
ವೃತ್ತಿಯಲ್ಲಿ ತೀವ್ರ ಪೈಪೋಟಿ. ಕಠಿಣ ಶ್ರಮದಿಂದಷ್ಟೇ ಯಶಸ್ಸು ಪಡೆಯಲು ಸಾಧ್ಯ. ಇತರರ ಮೇಲೆ ಅತಿಯಾದ ಅವಲಂಬನೆ ಬೇಡ.
ಮಿಥುನ
ವೃತ್ತಿಯಲ್ಲಿ ಹೆಚ್ಚುವರಿ ಜವಾಬ್ದಾರಿ. ಒತ್ತಡ ದಿಂದಾಗಿ ಮನಸ್ಸಿನ ನೆಮ್ಮದಿ ಕಲಕಬಹುದು. ಸಂಜೆ ವೇಳೆಗೆ ಎಲ್ಲವೂ ಸುಸ್ಥಿತಿಗೆ ಬರುವುದು, ನಿರಾಳತೆ.
ಕಟಕ
ಆರೋಗ್ಯದ ಕುರಿತು ಹೆಚ್ಚು ಗಮನ ಕೊಡಿ. ನಿರ್ಲಕ್ಷ್ಯ ಬೇಡ. ಕುಟುಂಬ ಸದಸ್ಯರಿಂದ ಮನಸ್ಸಿನ ನೆಮ್ಮದಿ ಕಲಕುವ ವರ್ತನೆ ತೋರಿಬಂದೀತು.
ಸಿಂಹ
ಗ್ರಹಗತಿಗಳು ನಿಮಗೆ ಪೂರಕವಾಗಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಕಠಿಣ ಸವಾಲು. ವೃತ್ತಿಯಲ್ಲಿ ಹಿನ್ನಡೆ. ವಿರೋಧಿಗಳ ಮೇಲುಗೈ.
ಕನ್ಯಾ
ಮನೆಯ ಕಾರ್ಯವನ್ನು ಸುಸಂಘಟಿತವಾಗಿ ನೆರವೇರಿಸಿ. ಇಲ್ಲವಾದರೆ ಗೊಂದಲದ ಗೂಡಾದೀತು. ಸಹಾಯ ಪಡೆಯಲು ಹಿಂಜರಿಕೆ ತೋರದಿರಿ.
ತುಲಾ
ಮಾಡಿದ ತಪ್ಪುಗಳನ್ನು ಸರಿಪಡಿಸಲು ಸಕಾಲ. ನಿಮ್ಮ ನಡೆನುಡಿಗಳನ್ನು ಪರಾಮರ್ಶೆ ಮಾಡಿಕೊಳ್ಳಿ. ಇತರರಿಗೆ ಸಹ್ಯವಾಗುವಂತೆ ನಡಕೊಳ್ಳಿ.
ವೃಶ್ಚಿಕ
ವೃತ್ತಿಯಲ್ಲಿ ಇತರರಿಂದ ಅಸಹಕಾರ ಎದುರಿಸುವಿರಿ. ನಿಮ್ಮನ್ನು ತುಳಿಯಲು ಕೆಲವರು ಯತ್ನಿಸುವರು. ಕೌಟುಂಬಿಕ ಭಿನ್ನಮತ. ವಾಗ್ವಾದ ನಡೆದೀತು.
ಧನು
ಬದುಕಿನಲ್ಲಿ ಕೆಲವು ಬದಲಾವಣೆ ಉಂಟಾದೀತು. ಇತರರಿಗೆ ನೀಡಿದ ವಾಗ್ದಾನ ಪೂರೈಸಲು ಆದ್ಯತೆ ಕೊಡಿ. ಕೌಟುಂಬಿಕ ಸಹಕಾರ.
ಮಕರ
ಕೆಲಸದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಬೇಡ. ನಿಮಗೆ ಯಶಸ್ಸು ಸಿಗಲಿದೆ. ಆತ್ಮೀಯರ ಮಾತು ನಿಮ್ಮ ಮನಸ್ಸು ನೋಯಿಸಬಹುದು.
ಕುಂಭ
ಸಾಮಾಜಿಕ ಕಾರ್ಯದಲ್ಲಿ ಇಂದು ಹೆಚ್ಚು ವ್ಯಸ್ತರು. ಕೆಲವರ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದಿರಿ. ಮನೆಯಲ್ಲಿ ಸಹಕಾರ, ಸಮಾದಾನ.
ಮೀನ
ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದೆ ಕೆಲಸ ಮಾಡಿ. ಅದುವೇ ನಿಮಗೆ ಉತ್ತಮ ಯಶ ದೊರಕಿಸುವುದು. ಧನಲಾಭ, ಜತೆಗೇ ಖರ್ಚೂ ಹೆಚ್ಚು.