ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಪಕ್ಕದಲ್ಲೇ ಬರುತ್ತಿದ್ದ ವಾಹನವೊಂದಕ್ಕೆ ಬುಲೆಟ್ ಬೈಕ್ ಟಚ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಯುವಕ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾನೆ.
ಮೃತ ಯುವಕನನ್ನು ಚಿಕ್ಕಬಳ್ಳಾಪುರ ನಗರದ ರಾಹುಲ್ (18) ಎಂದು ಗುರುತಿಸಲಾಗಿದೆ. ಬುಲೆಟ್ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಿಕ್ಕಬಳ್ಳಾಪುರ ನಗರದ ನಿವಾಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ .
ಅಪಘಾತದ ಕುರಿತಂತೆ ಕೆಂಪೇಗೌಡ ಏರ್ ಪೋರ್ಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.