ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ: ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು, ಅಜ್ಜಿಯ ಕಾಲು ಕಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಸಿಲಿಕಾನ್ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಲಾರಿಯೊಂದು (Lorry) ಬೈಕ್‌ಗೆ (Bike) ಡಿಕ್ಕಿಯಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆನಾಯಂಡಹಳ್ಳಿ ಸಿಗ್ನಲ್‌ನ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.

ವಿಜಯನಗರ ಬಳಿಯ ಅತ್ತಿಗುಪ್ಪೆ ಮೂಲದ ಅನುಷಾ ಸಾವನ್ನಪ್ಪಿದ ಮಹಿಳೆ. ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್‌ ಬಳಿ ಅತಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅನುಷಾ ಸಾವನ್ನಪ್ಪಿದ್ದಾರೆ. ಜೊತೆಗೆಇದ್ದ ತಾಯಿ ವನಜಾಕ್ಷಿ ಸ್ಥಿತಿ ಗಂಭೀರವಾಗಿದ್ದು, ಕಾಲು ಕಟ್‌ ಆಗಿದೆ. ಇನ್ನೂ 7 ವರ್ಷದ ಮಗ ಆರ್ಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಮಾಡಿ ನಿಲ್ಲಿಸದೇ ವೇಗವಾಗಿ ಪರಾರಿಯಾಗುತ್ತಿದ್ದ ಲಾರಿಯನ್ನು ನೋಡಿ ಕೆಎಸ್‌ಆರ್‌ಟಿಸಿ ಚಾಲಕ ಲಾರಿಯನ್ನು ತಡೆಯುವುದಕ್ಕೆ ಮುಂದಾಗಿ ಬಸ್‌ ಅನ್ನು ಅಡ್ಡಲಾಗಿ ನಿಲ್ಲಿಸಿದ್ದಾನೆ.ಬಸ್‌ ಅಡ್ಡ ಬರುತ್ತಿದ್ದಂತೆ ಚಾಲಕ ಲಾರಿಯಿಂದಲೇ ಜಿಗಿದು ಓಡಿ ಹೋಗಿದ್ದಾನೆ. ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ಲಾರಿ ಡಿಕ್ಕಿಯಾಗಿ ನಿಂತಿದೆ. ಭೀಕರ ಅಪಘಾತದ ಪರಿಣಾಮ ನಾಯಂಡಹಳ್ಳಿ ಸಿಗ್ನಲ್‌ನ 4 ಕಡೆಗೆ ತಟ್ಟಿದ್ದು, ಸುಮಾರು 2 ಗಂಟೆಗಳ ನಾಲ್ಕೈದು ಕಿಮೀ ಜಾಮ್ ಆಗಿ ವಾಹನ ಸವಾರರು ಪರದಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!