ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 4 ವರ್ಷದ ಮಗು ಮೃತಪಟ್ಟಿದೆ.
ನಾಲ್ಕು ವರ್ಷದ ಪೂರ್ವಿ ರಾವ್ ತನ್ನ ತಂದೆ ಜತೆಗೆ ಪ್ರೀ ಸ್ಕೂಲ್‌ಗೆ ತೆರಳುತ್ತಿದ್ದಳು. ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ಬಿಎಂಟಿಸಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪೂರ್ವಿ ತಂದೆ ಎಡಭಾಗಕ್ಕೆ ಬಿದ್ದಿದ್ದು, ಪೂರ್ವಿ ಬಲಭಾಗಕ್ಕೆ ಬಿದ್ದಿದ್ದಾಳೆ. ಬಸ್ ಪೂರ್ವಿ ಮೇಲೆ ಹರಿದು ಹೋಗಿದೆ. ಸ್ಥಳದಲ್ಲೇ ಮಗು ಮೃತಪಟ್ಟಿದೆ.