ಕಲಬುರಗಿಯಲ್ಲಿ ಭೀಕರ ಮರ್ಡರ್: ಕೊಲೆ ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ನಗರದಲ್ಲಿ ಜನವರಿ 4ರಂದು ವ್ಯಕ್ತಿವೋವ೯ನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬಬ೯ರವಾಗಿ ನಡೆದಿದ್ದ ಕೊಲೆಯ ದೃಶ್ಯಗಳು ಕ್ಯಾಮೆರಾ ಸೆರೆಯಾಗಿದ್ದು,ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದವರಿಗೆ ಎದೆ ಜಲ್ ಎನ್ನುತ್ತಿದೆ.

ಕಲಬುರಗಿ ನಗರದ ಭವಾನಿ ನಗರದ ರಿಂಗ್ ರಸ್ತೆಯಲ್ಲಿ ಜ.4ರಂದು ಚೆನ್ನವೀರ ನಗರದ ಪ್ರಶಾಂತ್ ಕುಂಬಾರ ಎಂಬುವವನನನ್ನು,ಅದೇ ನಗರದ ನಿವಾಸಿ ಮಂಜುನಾಥ್ ಸ್ವಾಮಿ ಎಂಬುವವನು ಬಬ೯ರವಾಗಿ ಕೊಲೆ ಮಾಡಿದ್ದನು. ಹಾಡುಹಗಲೇ ಜನನೀಬಿಡ ಪ್ರದೇಶದಲ್ಲಿ ಬಬ೯ರವಾಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ವಿಡಿಯೋ ಇದೀಗ ಎಲ್ಲಾ ಕಡೆಗೆ ಬಿತ್ತರವಾಗಿದೆ.

ಈಗಾಗಲೇ ಕೊಲೆ ಮಾಡಿದ ಆರೋಪಿಯನ್ನು ಪೋಲಿಸರು ಬಂಧಿಸಿದ್ದು,ಕಲಬುರಗಿ ನಗರದ ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!