ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿಯ ಸೇಡಂ ತಾಲೂಕಿನ ಕೊಡಂಗಲ್ ರಸ್ತೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಯುವಕನೊಬ್ಬ ಮೃತಪಟ್ಟಿದ್ದಾನೆ.
ಸೇಡಂ ಕಡೆಯಿಂದ ಕೊಡಂಗಲ್ ಕಡೆಗೆ ಬೈಕ್ ಮೇಲೆ ಹೋಗುವಾಗ ಏಕಾ ಏಕಿ ಬಂದ ಲಾರಿ ಬೈಕ್ ಸವಾರನ ತಲೆ ಮೇಲೆ ಹಾಯ್ದು ಹೋಗಿರುವುದರಿಂದ ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಸೇಡಂ ತಾಲೂಕಿನ ಕುರುಕುಂಟಾದ ಸಿಸಿಐ ಕಾಲೋನಿಯ ಇಂದಿರಾ ನಗರದ ನಿವಾಸಿ ಕಾಶಿನಾಥ್ ಶಂಕರ ರಾಠೋಡ್ (30) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈ ಕುರಿತು ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.