ಹೊಸದಿಗಂತ ಯಲ್ಲಾಪುರ:
ಕಾರೊಂದು ಬೈಕ್ಗೆ ಡಿಕ್ಕಿಹೊಡೆದು ಸವಾರರಿಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ತಾಲೂಕಿನ ಚಿಕ್ಕ ಮಾವಳ್ಳಿ ಕ್ರಾಸ್ ಬಳಿ ನಡೆದಿದೆ.
ಹುಬ್ಬಳ್ಳಿಯ ನೇಕಾರನಗರದ ರಾಮು ಮಾರುತಿ ಗುಜಲೂರ (17) ಹಾಗೂ ವಿಷ್ಣು ಜಯಪ್ಪ ಗುಜಲೂರ (16) ಮೃತ ಸವಾರರು. ಇವರು ಬೈಕ್ ಮೇಲೆ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುವಾಗ ಕಾರೊಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಡಿಕ್ಕಿ ಹೊಡೆದ ಕಾರು ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ತೆಗಾಗಿ ಜಾಲ ಬೀಸಿದ್ದಾರೆ.