ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರ್ಯಾಕ್ಟರ್ ಮತ್ತು ದಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಮೃತಪಟ್ಟಿರುವ ದುರ್ಘಟನೆ ರಾಯಚೂರಿನ ದೇವದುರ್ಗ ಪಟ್ಟಣದ ಹೊರವಲಯದ ನಗರಗುಂಡ ಗ್ರಾಮದ ರಸ್ತೆಯಲ್ಲಿ ಸಂಭವಿಸಿದೆ.
ರಂಜಾನ್ ಅಲಿ (30) ಮತ್ತು ಹಸೀನಾಬೇಗಂ ಅಲಿ (25) ಮೃತ ದಂಪತಿ. ಬೆಳಕಲ್ ಗ್ರಾಮದ ಹಸೀನಾಬೇಗಂಳನ್ನು ಅರಷಣಗಿ ಗ್ರಾಮದ ರಂಜಾನ್ ಅಲಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಪತ್ನಿ ಇತ್ತೀಚೆಗಷ್ಟೇ ಹೆರಿಗೆಂದು ತನ್ನ ತವರು ಮನೆಯಾದ ಬೆಳಕಲ್ ಗ್ರಾಮಕ್ಕೆ ಬಂದಿದ್ದಳು. ದೇವದುರ್ಗ ಪಟ್ಟಣದಲ್ಲಿ ಕೆಲಸ ಇದ್ದುದ್ದರಿಂದ ದಂಪತಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದರು.
ಮಾರ್ಗ ಮಧ್ಯ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಓವರ್ ಟೇಕ್ ಮಾಡುವ ವೇಳೆ ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಕೆಳಗೆ ಬಿದ್ದಿದ್ದಾರೆ. ಹಸೀನಾಬೇಗಂ ಹಾಗೂ ರಂಜಾನ್ ಅಲಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲಿ ಟ್ರಾಕ್ಟರ್ ಬಿಟ್ಟು ಓಡಿ ಹೋಗಿದ್ದಾಗಿ ತಿಳಿದು ಬಂದಿದೆ.

