SHOCKING VIDEO| ಹಸುವಿನ ಕೋಪಕ್ಕೆ ತುತ್ತಾದ ಬಾಲಕಿ, ಎದೆ ಝಲ್ಲೆನಿಸುವ ದೃಶ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಷ್ಟು ದಿನ ಬೀದಿ ನಾಯಿಗಳ ದಾಳಿಗಳ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೆವು, ಅವುಗಳ ಸಾಲಿಗೆ ಈಗ ಗೂಳಿ, ಹಸುಗಳೂ ಸೇರಿಕೊಂಡಿವೆ. ರಸ್ತೆಗಳಲ್ಲಿ ಓಡಾಡುವರ ಮೇಲೆ ಜಾನುವಾರುಗಳು ದಾಳಿ ನಡೆಸುತ್ತಿವೆ. ಇಂಥಹದ್ದೇ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಚೆನ್ನೈನ ಎಂಎಂಡಿಎ ಕಾಲೋನಿಯ ಇಲಾಂಗ್ ಸ್ಟ್ರೀಟ್‌ನಲ್ಲಿ ಗುರುವಾರ ನಡೆದ ಈ ಗಟನೆ ನಡುಗರನ್ನು ಬೆಚ್ಚಿಬೀಳಿಸಿದೆ. ಹಸುವೊಂದು ಒಂಬತ್ತು ವರ್ಷದ ಬಾಲಕಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ. ತಮ್ಮ ಕೊಂಬುಗಳೊಂದಿಗೆ ನೆಲಕ್ಕೆ ಕೆಡವಿ, ಗಂಭೀರವಾಗಿ ಗಾಯಗೊಳಿಸಿದೆ. ಸುತ್ತಲೂ ಜಮಾಯಿಸಿದ ಜನರು ತಡೆಯಲು ದೊಣ್ಣೆ, ಕಲ್ಲುಗಳಿಂದ ಹೊಡೆದರೂ ಹೆದರದೆ ತನ್ನ ದಾಳಿ ಮುಂದುವರೆಸಿದೆ.

ಸುತ್ತಲೂ ಜಮಾಯಿಸಿದ ಜನರು ಜೋರಾಗಿ ಕೂಗಿದರು ಕಟ್ಟಿಗೆ, ದೊಣ್ಣೆಗಳಿಂದ ಹೊಡೆದು ಅಂತಿಮವಾಗಿ ಬಾಲಕಿಯನ್ನು ರಕ್ಷಿಸಿದರು. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಸು ದಾಳಿ ಘಟನೆಗೆ ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ರಸ್ತೆಗಳಲ್ಲಿ ಬಿಡಾಡಿ ದನಗಳನ್ನು ಹಿಡಿದು ಅವುಗಳ ಮಾಲೀಕರಿಗೆ ದಂಡ ವಿಧಿಸುವ ಪ್ರಯತ್ನವನ್ನು ಇನ್ನಷ್ಟು ಬಲಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ರಸ್ತೆಗಳಲ್ಲಿ ಸಂಚರಿಸುವಾಗ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ, ಜಾನುವಾರುಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!