ಹೊಸದಿಗಂತ ವರದಿ ಬೆಳಗಾವಿ:
ಭೀಕರ ರಸ್ತೆ ದುರಂತವೊಂದರಲ್ಲಿ ದಂಪತಿ ಸಾವನ್ನಪ್ಪಿ, ಅವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಬಳಿ ನಡೆದಿದೆ.
ಈ ದಂಪತಿ ತಮ್ಮ ಕಾರಿನಲ್ಲಿ ಹುಬ್ಬಳ್ಳಿಯಿಂದ ಕೊಲ್ಹಾಪೂರಕ್ಕೆ ಹೋಗುತ್ತಿದ್ದಾಗ ನಿಪ್ಪಾನಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗನೋಳ್ಳಿ ಚೆಕ್ ಪೋಸ್ಟ್ ಬಳಿ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದು ಈ ದುರಂತ ಘಟಿಸಿದೆ.
ಈ ಅಪಘಾತದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಸಂಭಾಜಿ ನಗರದ ಜಿಗರ ಕಿಶೋರ ನಾಕ್ರಾನಿ ಹಾಗೂ ಆತನ ಹೆಂಡತಿ ಹೇತಿಕಾ ಮೃತಪಟ್ಟಿದ್ದಾರೆ. ಇವರ ಒಂದು ವರ್ಷದ ಮಗಳು ವೃಷ್ಟಿ (1) ಬದುಕುಳಿದಿದ್ದಾಳೆ.



