July 24, 2026
Friday, July 24, 2026
spot_img

ರಷ್ಯಾದಿಂದ ತೈಲ ಹೇರಿಕೊಂಡು ಚೀನಾ ಹೊರಟಿದ್ದ ಬೃಹತ್ ಹಡಗು ಭಾರತದ ಕಡೆಗೆ ಯು-ಟರ್ನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಮಹತ್ವದ ಬೆಳವಣಿಗೆ‌ ನಡೆದಿದ್ದು, ರಷ್ಯಾದಿಂದ ಚೀನಾದ ಕಡೆ ಹೊರಟಿದ್ದ ತೈಲ ಹೊತ್ತ ಬೃಹತ್ ನೌಕೆ ದಕ್ಷಿಣ ಚೀನಾ ಸಮುದ್ರ ತಲುಪುವ ವೇಳೆ ಭಾರತದತ್ತ ಮುಖಮಾಡಿದೆ.

ಈಗಾಗಲೇ ರಷ್ಯಾದಿಂದ ತೈಲ ಖರೀದಿ ಹೆಚ್ಚಿಸುವ ಲೆಕ್ಕಾಚಾರದಲ್ಲಿ ಭಾರತ ಇರುವ ವೇಳೆಯೇ ಈ ಮಹತ್ತರ ಬೆಳವಣಿಗೆ ನಡೆದಿದೆ .

ಜನವರಿ ಅಂತ್ಯದಲ್ಲಿ ‘ಆಕ್ವಾ ಟೈಟನ್’ ಎಂಬ ಹೆಸರಿನ ಹಡಗು ರಷ್ಯಾದ ಬಾಲ್ಟಿಕ್ ಸಮುದ್ರದ ಬಂದರಿನಿಂದ ತೈಲವನ್ನು ತುಂಬಿ ಚೀನಾದ ‘ರಿಝಾವೊ’ ಬಂದರಿನತ್ತ ಹೊರಟಿತ್ತು. ಆದರೆ ಆಗ್ನೇಯ ಏಷ್ಯಾದಲ್ಲಿ ಮಧ್ಯಭಾಗಕ್ಕೆ ತಲುಪುವ ವೇಳೆ ತನ್ನ ದಿಕ್ಕನ್ನು ಬದಲಾಯಿಸಿದ್ದು, ಭಾರತದತ್ತ ಹೊರಟಿದೆ ಎಂದು ಹಡಗುಗಳ ಡೇಟಾ ಟ್ರ್ಯಾಕಿಂಗ್ ಇಲಾಖೆ ಮಾಹಿತಿ ನೀಡಿದೆ.

ಈ ಹಡಗು ಮಾ. 21 ರಂದು ಮಂಗಳೂರಿನ ಬಂದರು ತಲುಪುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದೆ.

ಇದರ ನಡುವೆ ಈಗಾಗಲೇ ಭಾರತ ತೈಲ ಪೂರೈಕೆಯ ಕೊರತೆಯನ್ನು ನೀಗಿಸಲು ರಷ್ಯಾದಿಂದ ಬರೋಬ್ಬರಿ 30 ಮಿಲಿಯನ್ ಬ್ಯಾರೆಲ್ ತೈಲವನ್ನು ಖರೀದಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !