Monday, November 10, 2025

ಊಟ ಮಾಡ್ತಿರೋವಾಗ್ಲೇ ನಡೀತು ಭಯಾನಕ ಗುಂಡಿನ ದಾಳಿ: ರೆಸ್ಟೋರೆಂಟ್​ನಲ್ಲಿ ಹರಿಯಿತು ರಕ್ತದೋಕುಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಉತ್ತರ ಕೆರೊಲಿನಾ ರಾಜ್ಯದ ಸೌತ್‌ಪೋರ್ಟ್ ಯಾಚ್ ಬೇಸಿನ್‌ನಲ್ಲಿ ಶನಿವಾರ ರಾತ್ರಿ ಭಯಾನಕ ಗುಂಡಿನ ದಾಳಿ ನಡೆದಿದೆ. ಅಮೆರಿಕನ್ ಫಿಶ್ ಕಂಪನಿ ರೆಸ್ಟೋರೆಂಟ್ ಬಳಿ ದೋಣಿಯಿಂದ ಬಂದ ಶೂಟರ್ ಜನಸಮೂಹದ ಮೇಲೆ ಗುಂಡು ಹಾರಿಸಿದ್ದು, ಘಟನೆ ಸಮಯದಲ್ಲಿ ಮೂವರು ಮೃತಪಟ್ಟಿದ್ದು, ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಯಭೀತರಾಗಿ ಜನರು ಓಡಿಹೋದ ಪರಿಣಾಮ ಸ್ಥಳದಲ್ಲಿ ಗೊಂದಲ ಪರಿಸ್ಥಿತಿ ನಿರ್ಮಾಣವಾಯಿತು.

ಸ್ಥಳೀಯ ಪೊಲೀಸ್ ಮತ್ತು ಶೆರಿಫ್ ಕಚೇರಿಗಳು ಶೂಟರ್ ಪರಿಶೀಲನೆಗೆ ತೊಡಗಿದ್ದು, ಶೂಟರ್ ದೋಣಿಯಿಂದ ಓಡಿಹೋಗಿ ಪರಾರಿಯಾಗಿದ್ದಾನೆ. ರೆಸ್ಟೋರೆಂಟ್‌ನಲ್ಲಿ ಶನಿವಾರ ರಾತ್ರಿ ಲೈವ್ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಹೆಚ್ಚಿನ ಜನರಿದ್ದು, ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ.

error: Content is protected !!