ಹೊಸದಿಗಂತ ವರದಿ, ಯಾದಗಿರಿ:
ಈರುಳ್ಳಿ ಬೆಳೆ ಶೆಡ್ ನಿರ್ಮಾಣದ ಸಬ್ಸಿಡಿ ಹಣ ಬಿಡುಗಡೆ ಸಂಬಂಧ ಲಂಚದ ಬೇಡಿಕೆ ಇಟ್ಟು, ಫೋನ್ ಪೇ ಮೂಲಕ ಹಣ ಪಡೆದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವದತ್ತ ಗುರುವಾರ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ಗುರಮಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದ ರೈತ ಶಂಕ್ರಪ್ಪ ಈರುಳ್ಳಿ ಶೆಡ್ ನಿರ್ಮಿಸಿಕೊಂಡಿದ್ದ. ಸರ್ಕಾರದಿಂದ 80 ಸಾವಿರ ರೂ. ಸಬ್ಸಿಡಿ ಬಿಡುಗಡೆಯಾಗಿದ್ದು, ಇದರಲ್ಲಿ 20 ಸಾವಿರ ರೂ.ಹಣದ ಬೇಡಿಕೆ ಶಿವದತ್ತ ಇಟ್ಟಿದ್ದ. ಮುಂಗಡವಾಗಿ 5 ಸಾವಿರ ರೂ.ಫೋನ್ ಪೇ ಮೂಲಕ ರೈತರಿಂದ ಪಡೆದುಕೊಂಡಿದ್ದ.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿನ ತೋಟಗಾರಿಕೆ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾ ಪೋಲಿಸರು ಶಿವದತ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.