ಕೆಲಸದಲ್ಲಿ ಎಂದಿಗಿಂತ ಹೆಚ್ಚೇ ಬದ್ಧತೆ ಪ್ರದರ್ಶಿಸಬೇಕು. ಇಲ್ಲವಾದರೆ ಸೂಕ್ತ ಫಲ ಪಡೆಯಲಾರಿರಿ. ವಿವಾಹಿತರ ಪಾಲಿಗೆ ಸಂತೋಷದ ಬೆಳವಣಿಗೆ.
ವೃಷಭ
ದೈನಂದಿನ ಬೆಳವಣಿಗೆ ಮೇಲೆ ಹೆಚ್ಚಿನ ನಿಗಾ ಇಡಿ. ನಿಮ್ಮ ಬದುಕಿನ ಮೇಲೆ ದೊಡ್ಡ ಪರಿಣಾಮ ಉಂಟಾದೀತು. ಸ್ನೇಹಿತರ ಭೇಟಿ.
ಮಿಥುನ
ಆಶಾವಾದದಿಂದಲೇ ಕಾರ್ಯ ನಿರ್ವಹಿಸಿ. ಉತ್ತಮ ಫಲಿತಾಂಶ ಸಿಗುವುದು. ಮಾಡುವ ಕಾರ್ಯದಲ್ಲಿ ಶಂಕೆ ಬೇಡ. ಬೆನ್ನು ನೋವು ಸಮಸ್ಯೆ ಕಾಡಬಹುದು.
ಕಟಕ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ನಿಮಗೆ ಪೂರಕ ಬೆಳವಣಿಗೆ. ದೂರ ಪ್ರಯಾಣದ ಸಂಭವವಿದೆ. ಇತ್ತೀಚಿನ ಹಣದ ಹೂಡಿಕೆಯಿಂದ ಲಾಭ ಗಳಿಸುವಿರಿ.
ಸಿಂಹ
ನಿಮ್ಮ ಕಾರ್ಯ ಸಕಾಲದಲ್ಲಿ ಮುಗಿಸಿ. ನಾಳೆಗಿಟ್ಟ ಕಾರ್ಯ ಎಂದೂ ಮುಗಿಯದು. ಸಂಗಾತಿ ಜತೆ ಆತ್ಮೀಯ ಕಾಲಕ್ಷೇಪ. ಆರೋಗ್ಯ ಸುಧಾರಣೆ.
ಕನ್ಯಾ
ಅತ್ಯುತ್ಸಾಹದಿಂದ ಕೆಲಸದಲ್ಲಿ ತಪ್ಪು ಎಸಗದಿರಿ. ಸಾವಧಾನ ಲೇಸು. ಕೌಟುಂಬಿಕ ಬಿಕ್ಕಟ್ಟನ್ನು ಹೊಂದಾಣಿಕೆಯಿಂದ ಬಗೆಹರಿಸಿರಿ.
ತುಲಾ
ಇಂದಿನ ದಿನ ನಿಮಗೆ ಮಹತ್ವದ್ದು. ಪ್ರಮುಖ ಕಾರ್ಯ ಯಶಸ್ವಿಯಾಗಿ ಸಾಧಿಸುವಿರಿ. ಬಂಧುಗಳಿಂದ ಸೂಕ್ತ ಸಹಕಾರ. ಆರ್ಥಿಕ ಅಡಚಣೆ ನಿವಾರಣೆ.
ವೃಶ್ಚಿಕ
ಪ್ರಯಾಣದ ಸಾಧ್ಯತೆ. ಕೌಟುಂಬಿಕ ವ್ಯವಹಾರ ಇಂದು ಆದ್ಯತೆ ಪಡೆಯುವುದು. ಕುಟುಂಬ ಸದಸ್ಯರ ಭಿನ್ನಮತ ಪರಿಹರಿಸುವ ಹೊಣೆ ನಿಮ್ಮದು.
ಧನು
ಕೆಲವು ಸಮಸ್ಯೆ ಎದುರಿಸುವಿರಿ. ಮಾನಸಿಕ ಒತ್ತಡ. ಹಾಗಾಗಿ ಪ್ರತಿ ವಿಷಯದಲ್ಲೂ ಯೋಚಿಸಿ ಹೆಜ್ಜೆಯಿಡಿ. ಖರ್ಚು ಅಧಿಕ.
ಮಕರ
ಇಂದು ಎಲ್ಲಾ ವ್ಯವಹಾರ ಸುಲಲಿತವಾಗಿ ಸಾಗುವುದು. ಕಾರ್ಯದಲ್ಲಿ ಸಫಲತೆ. ಕೌಟುಂಬಿಕ ಭಿನ್ನಮತ ನಿವಾರಣೆ. ಸೌಹಾರ್ದ ಹೆಚ್ಚುವುದು.
ಕುಂಭ
ಸಹನೆಯೇ ಕಾರ್ಯ ಸಾಧನೆಗೆ ಸಾಧನ. ಇದನ್ನು ನೀವು ಅರಿಯಬೇಕು. ಯಾವುದಕ್ಕೂ ಅವಸರ ಮಾಡದಿರಿ. ಕೌಟುಂಬಿಕ ಸಹಕಾರ ಸಿಗುವುದು.
ಮೀನ
ಎಲ್ಲ ವಿಷಯಗಳಲ್ಲಿ ಇಂದು ಸಫಲತೆ. ಕುಟುಂಬದಲ್ಲಿ ನಿಮ್ಮ ಧೋರಣೆಗೆ ಬೆಂಬಲ. ಇತ್ತೀಚೆಗೆ ಮೂಡಿದ್ದ ವಿರಸ ನಿವಾರಣೆ. ಸಂಬಂಧ ಸುಧಾರಣೆ.