ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕರ್ತವ್ಯಶೀಲತೆಗೆ ಅಡ್ಡಿ ಬರಲಿದೆ. ಆಕ್ರಮಣಕಾರಿ ನಿಲುವು ನಿಮಗಿಂದು ಫಲ ನೀಡದು. ಎಲ್ಲರ ಜತೆಗೆ ಹೊಂದಿಕೊಂಡು ಹೋಗುವುದೇ ನಿಮಗೆ ಹಿತಕಾರಿ.
ವೃಷಭ
ಮೊದಲಿಗೆ ಪ್ರಮುಖ ಕಾರ್ಯ ಮುಗಿಸಿ. ಬಳಿಕ ಇತರ ವಿಷಯಗಳತ್ತ ಗಮನ ಹರಿಸಿ. ಪ್ರೀತಿಪಾತ್ರರ ಒಡನಾಟದಲ್ಲಿ ಸಂತೋಷ ಕಾಣುವಿರಿ.
ಮಿಥುನ
ಎಲ್ಲವನ್ನೂ ಇಂದು ಹೆಚ್ಚು ನಿಖರತೆಯಿಂದ ಕಾಣಲು ಶಕ್ತರಾಗುವಿರಿ. ಆ ಮೂಲಕ ನಿಮ್ಮ ಸುತ್ತಲಿನ ಜನರ ನಿಜಬಣ್ಣ ಅರಿಯುವಿರಿ. ವಿವಾಹಿತರಿಗೆ ಶುಭದಿನ.
ಕಟಕ
ಸಂತೋಷದ ಸುದ್ದಿಯನ್ನು ಎಲ್ಲರಿಂದ ಅಡಗಿಸಿಟ್ಟಿದ್ದೀರಾದರೆ ಇಂದು ಬಹಿರಂಗ ಗೊಳಿಸಿ. ಆತ್ಮೀಯರು ನಿಮ್ಮ ಏಳಿಗೆಗೆ ಸಂತೋಷಪಡುವರು.
ಸಿಂಹ
ಪ್ರಗತಿಯಲ್ಲಿ ಅಡ್ಡಿ. ಶಾಂತಚಿತ್ತರಾಗಿ ಮುನ್ನಡೆಯಿರಿ. ಯಾರ ಜತೆಗೂ ಅನವಶ್ಯ ಮಾತುಕತೆಯಲ್ಲಿ ತೊಡಗದಿರಿ. ಅದು ನಿಮಗೆ ಪ್ರತಿಕೂಲಕರ.
ಕನ್ಯಾ
ದುಡಿಮೆ ಕಠಿಣವೆಂದು ಅದರಿಂದ ದೂರ ಹೋಗದಿರಿ. ಕಾರ್ಯ ಮುಂದುವರಿಸಿ. ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಭಾವನಾತ್ಮಕ ಒತ್ತಡ.
ತುಲಾ
ಪೂರಕ ದಿನವಲ್ಲ. ವ್ಯವಹಾರದಲ್ಲಿ ನಿರಾಶೆ. ಕೆಲ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕು. ಆರೋಗ್ಯಕರ ಆಹಾರ ಕ್ರಮ ಪಾಲಿಸಿದರೆ ಒಳ್ಳೆಯದು.
ವೃಶ್ಚಿಕ
ನಿಮ್ಮ ವ್ಯವಹಾರ ವಿಸ್ತರಿಸುವ ಉದ್ದೇಶ ಸಫಲವಾಗಲಿದೆ. ಅಡ್ಡಿಗಳ ನಿವಾರಣೆ. ಕೋಪತಾಪ ನಿಯಂತ್ರಿಸಿ. ಇಲ್ಲವಾದರೆ ಆತ್ಮೀಯರ ಜತೆ ಸಂಬಂಧ ಕೆಡಬಹುದು.
ಧನು
ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ವ್ಯವಹಾರದಲ್ಲಿ ನೀವು ಬಯಸಿದಂತೆ ಸಾಗುವುದು. ಬಂಧು ಗಳಿಂದ ಸಹಕಾರ. ಆರೋಗ್ಯ ಸ್ಥಿರ.
ಮಕರ
ವೃತ್ತಿಯಲ್ಲಿ ನಿಮ್ಮ ಹೆಸರು ಕೆಡಿಸಲು ಕೆಲವರ ಪ್ರಯತ್ನ. ಅದಕ್ಕೆ ಅವಕಾಶ ನೀಡದಿರಿ. ಸಮಾಜದಲ್ಲಿ ಹೆಚ್ಚು ಪ್ರಬುದ್ಧತೆಯಿಂದ ವರ್ತಿಸಿರಿ.
ಕುಂಭ
ಹೆಚ್ಚು ವಿಶೇಷಗಳಿಲ್ಲದ ಸಾಮಾನ್ಯ ದಿನ. ಎಂದಿನಂತೆ ಕಾರ್ಯ ಸಾಗುವುದು. ವೃತ್ತಿ ಬದಲಿಸಲು ಬಯಸುವವರಿಗೆ ಒಳಿತಾಗಲಿದೆ.
ಮೀನ
ವೃತ್ತಿಯಲ್ಲಿ ನಿಮ್ಮ ಗುರಿ ಸಾಧಿಸುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮ. ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಗಮನ ಕೊಡಿ. ಧಾರ್ಮಿಕ ಆಸಕ್ತಿ.