ದಿನಭವಿಷ್ಯ| ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸೂಕ್ತ ದಿನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಏಕಕಾಲಕ್ಕೆ ವಿವಿಧ ಹೊಣೆಗಾರಿಕೆ ನಿರ್ವಹಿಸುವ ಒತ್ತಡ. ಮನೆಯಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮನ್ನೆ ಎಲ್ಲರೂ ಅವಲಂಬಿಸುತ್ತಾರೆ.

ವೃಷಭ
ಇಷ್ಟಪಡುವ ವ್ಯಕ್ತಿಗಳ ಜತೆ  ಮನಸ್ಸಿನ ಭಾವನೆ ವ್ಯಕ್ತ ಪಡಿಸಲು ಸಕಾಲ. ಅವರಿಂದ ಪೂರಕ ಸ್ಪಂದನೆ. ಉದ್ಯೋಗಿಗಳಿಗೆ ಸಂತೋಷದ ಸುದ್ದಿ.

ಮಿಥುನ
ವೃತ್ತಿಗೆ ಸಂಬಂಧಿಸಿ ಪೂರಕ ಬೆಳವಣಿಗೆ. ನೀವು ಬಯಸಿದ ಪ್ರಗತಿ ಉಂಟಾಗುವುದು.  ಆಪ್ತರ ಸಂಗದಲ್ಲಿ ವಿರಾಮ ಕಾಲ ಕಳೆಯುವಿರಿ.

ಕಟಕ
ಖಾಸಗಿ ಅಥವಾ ವೃತ್ತಿ ಬದುಕಿನಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳ ಬೇಕಾಗುತ್ತದೆ. ಅದರಿಂದ ಒಳಿತೇ ಆಗಲಿದೆ. ಆರೋಗ್ಯ ಸಮಸ್ಯೆ ಪರಿಹಾರ.

ಸಿಂಹ
ವ್ಯಕ್ತಿಯೊಬ್ಬರು ನಿಮ್ಮ ಅಸಮಾಧಾನಕ್ಕೆ ಕಾರಣರಾಗುತ್ತಾರೆ. ಅವರ ಜತೆ ಜಾಗ್ರತೆಯಿಂದ ವ್ಯವಹರಿಸಿ. ಇಲ್ಲದಿದ್ದರೆ ಇಕ್ಕಟ್ಟಿಗೆ ಸಿಲುಕುವಿರಿ.

ಕನ್ಯಾ
ಮನೆ ಮತ್ತು ಕೆಲಸದ ಸ್ಥಳ ಎರಡರಲ್ಲೂ ಹೆಚ್ಚು ಕೆಲಸ. ಹೆಚ್ಚು ಹೊಣೆಗಾರಿಕೆ. ದೈಹಿಕ ಶ್ರಮಕ್ಕಿಂತಲೂ ಮಾನಸಿಕವಾಗಿ ಹೆಚ್ಚು ಬಳಲುತ್ತೀರಿ.

ತುಲಾ
ಕೆಲವು ಅಚ್ಚರಿಗಳು ಕಾದಿವೆ. ಚಿಂತೆಬೇಡ, ಎಲ್ಲವೂ ಕುಶಿ ತರುವಂತಹವೆ. ನಿಷ್ಪಲ ವೆಂದು ಭಾವಿಸಿದ ಕಾರ್ಯವು ಉತ್ತಮ ಫಲಿತಾಂಶ ತರಲಿದೆ.

ವೃಶ್ಚಿಕ
ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸೂಕ್ತ ದಿನ. ನಿಮ್ಮ ಪ್ರಸ್ತಾಪಕ್ಕೆ ಬೆಂಬಲ ದೊರಕುವುದು. ಮನಸ್ಸಿನ ಒತ್ತಡ  ನಿವಾರಣೆ. ಕಾರ್ಯ ಸಾಫಲ್ಯ.

ಧನು
ಮನೆಯಲ್ಲಿನ ಪರಿಸ್ಥಿತಿ ಮನಸ್ಸಿನ ಶಾಂತಿ ಕದಡುತ್ತದೆ. ಸಣ್ಣಪುಟ್ಟ ಆರೋಗ್ಯ ಬಾಧೆ. ಉದ್ಯೋಗದಲ್ಲಿ ಕೆಲವರು ನಿಮಗೆ ಸಮಸ್ಯೆ ಉಂಟುಮಾಡುವರು.

ಮಕರ
ಇತರರ ಪುಕ್ಕಟೆ ಸಲಹೆ ಗಳನ್ನು ಕಣ್ಣು ಮುಚ್ಚಿ ಅನುಸರಿಸಬೇಡಿ. ಅದರಿಂದ ತೊಂದರೆಗೆ ಸಿಲುಕುವಿರಿ. ಉದ್ಯೋಗದಲ್ಲಿ ಹೊಸ ಅವಕಾಶ ಲಭ್ಯ.

ಕುಂಭ
ಸಾಂಸಾರಿಕ ಸಮಸ್ಯೆಗಳು ಪರಿಹಾರ ಕಾಣುತ್ತವೆ. ಮುನಿದು ದೂರ ಹೋದವರು ಸಮೀಪವಾಗುತ್ತಾರೆ. ಎಲ್ಲರ ಜತೆ ಹೊಂದಾಣಿಕೆ ಮುಖ್ಯ.

ಮೀನ
ಕೆಲವು ಸನ್ನಿವೇಶ ಗಳಿಂದಾಗಿ  ಇತರರ ಮುಂದೆ ಮುಜುಗರಕ್ಕೆ ಈಡಾಗುವ ಪ್ರಸಂಗ. ಎಚ್ಚರಿಕೆಯಿಂದ ಹೊಣೆಗಾರಿಕೆ ನಿಭಾಯಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!