ದಿನಭವಿಷ್ಯ| ನಿಮ್ಮ ನಿರ್ಧಾರಗಳಿಗೆ ಇಂದು ಉತ್ತಮ ಫಲ ಸಿಗುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಮನೆ ಅಥವಾ ಕಚೇರಿಯಲ್ಲಿ  ಹಿರಿಯರ ಜತೆ ವಾಗ್ವಾದ ನಡೆದೀತು. ಸೌಹಾರ್ದತೆ ಕಾಪಾಡುವಲ್ಲಿ ಪ್ರಾಮಾಣಿಕತೆ ಅಗತ್ಯ ಎಂಬರಿವು ಇರಲಿ.

ವೃಷಭ
ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ. ನಿಮ್ಮ ಕಾರ್ಯಕ್ಕೆ ಉತ್ತಮ ಸಹಕಾರ.  ಆರೋಗ್ಯಕ್ಕೆ ಹೆಚ್ಚು ಗಮನ ಕೊಡಿ. ದೇಹಾಲಸ್ಯ  ನಿಮ್ಮನ್ನು ಕಾಡಬಹುದು.

ಮಿಥುನ
ಫಲಪ್ರದ ದಿನ. ಏನು ಸಾಧಿಸಬಯಸುತ್ತೀರೋ ಅದು ಸಾಧ್ಯವಾಗಲಿದೆ. ವೃತ್ತಿಯಲ್ಲಿ ಉನ್ನತಿ. ಕೌಟುಂಬಿಕ ಬಿಕ್ಕಟ್ಟು ಶಮನ. ಆರ್ಥಿಕ ಸ್ಥಿತಿ ಸುಧಾರಣೆ.

ಕಟಕ
ಕೆಲಸದ ಜಾಗದಲ್ಲಿ ಬದಲಾವಣೆ ಉಂಟಾದೀತು. ಅದಕ್ಕೆ ಒಗ್ಗಿಕೊಳ್ಳಲು ಕಲಿಯಿರಿ. ಎಲ್ಲವನ್ನೂ ವಿರೋಧಿಸುವ ಧೋರಣೆ ಬಿಟ್ಟುಬಿಡಿ.

ಸಿಂಹ
ದಿನವು ನೀರಸವಾಗಿ ಆರಂಭಗೊಂಡರೂ ಬಳಿಕ ನಿಮ್ಮಲ್ಲಿ ಉತ್ಸಾಹ ತುಂಬಲಿದೆ. ನೀವು ಬಯಸಿದ ಬೆಳವಣಿಗೆ ಸಂಭವಿಸಲಿದೆ. ಧನಲಾಭ, ವಸ್ತುಲಾಭ.

ಕನ್ಯಾ
ವಾಸ್ತವ ಸ್ಥಿತಿಗೆ ಕುರುಡಾಗದಿರಿ. ಕೆಲವು ವಿಷಯಗಳನ್ನು ಬದಿಗೆ ಸರಿಸಬೇಡಿ. ಅದರತ್ತ ಗಂಭೀರ ಗಮನ ಹರಿಸಿ. ಹಣದ ವಿಚಾರದಲ್ಲಿ  ಹೊಣೆಗಾರಿಕೆಯಿರಲಿ.

ತುಲಾ
ಹೆಚ್ಚಿನ ಕಷ್ಟವಿಲ್ಲದೆ ಇಂದು ನಿಮ್ಮ ಗುರಿ ಸಾಧಿಸುವಿರಿ. ಕುಟುಂಬಸ್ಥರ ಸಲಹೆಗೆ ಕಿವಿಗೊಡಿ. ಅಲಕ್ಷ್ಯ ಮಾಡಿದರೆ ಅದು ಸಂಘರ್ಷಕ್ಕೆ ಕಾರಣವಾದೀತು.

ವೃಶ್ಚಿಕ
ವ್ಯಕ್ತಿಯೊಬ್ಬರು ನಿಮ್ಮ ಮೇಲೆ ಪ್ರಭಾವ ಬೀರಬಹುದು. ಹಳೆಯ ಹೂಡಿಕೆಯಿಂದ ಲಾಭ. ಕೌಟುಂಬಿಕ ಶಾಂತಿ ಕೆಡಿಸುವ ಮಾತು ಆಡದಿರಿ.

ಧನು
ನಿಮ್ಮ ನಿರ್ಧಾರಗಳಿಗೆ ಇಂದು ಉತ್ತಮ ಫಲ ಸಿಗುವುದು. ಆರ್ಥಿಕ ಉನ್ನತಿ. ಕ್ರೀಡಾಪಟುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಯಶಸ್ಸು ಸಿಗಲಿದೆ.

ಮಕರ
ಕೆಲಸದಲ್ಲಿ ಬದ್ಧತೆ ಇರಲಿ. ಪದೇಪದೇ ನಿಲುವು ಬದಲಿಸಬೇಡಿ. ಸಣ್ಣ ಹಿನ್ನಡೆಗೇ ಅಂಜಿ ಕೂರಬೇಡಿ. ತಾಳ್ಮೆಯಿಂದ ಕಾರ್ಯವೆಸಗಿ.

ಕುಂಭ
ನಿಮ್ಮ ವ್ಯವಹಾರದಲ್ಲಿ ಯಶಸ್ಸು. ಜನಮನ್ನಣೆ. ಕೌಟುಂಬಿಕ ಪರಿಸರದಲ್ಲಿ ಶಾಂತಿ, ಸಮಾಧಾನ. ಆಪ್ತರೊಡನೆ ಸೌಹಾರ್ದ ಬಾಂಧವ್ಯ. ಒಟ್ಟಿನಲ್ಲಿ  ಸಫಲ ದಿನ.

ಮೀನ
ನಿಮ್ಮ ವ್ಯವಹಾರ ವಿಸ್ತರಿಸುವುದು ಮುಖ್ಯ ಗುರಿಯಾಗಿರಲಿ.ಅದೃಷ್ಟ ನಿಮ್ಮ ಜತೆಗಿದೆ. ಹಾಗಾಗಿ ಯಾವುದೇ ಹಿನ್ನಡೆ ಬಾಧಿಸದು. ಎಲ್ಲರ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!