ದಿನಭವಿಷ್ಯ| ಕುಟುಂಬಸ್ಥರ ಜತೆ ಅಥವಾ ಸ್ನೇಹಿತರ ಜತೆ ವಾಗ್ವಾದ ನಡೆದೀತು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ವೃತ್ತಿಯಲ್ಲಿ ಹಾಗೂ ಕುಟುಂಬದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಸಂಬಂಧ ವೃದ್ಧಿ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಆರ್ಥಿಕ ಉನ್ನತಿ.

ವೃಷಭ
ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ನಿಮ್ಮ ಕಾರ್ಯ ಸಫಲ. ಕಾಟಾಚಾರದ ವ್ಯವಹಾರ ಒಳಿತು ತರದು. ಅವಶ್ಯ ನೆರವು ಪಡೆಯಿರಿ.

ಮಿಥುನ
ಕೌಟುಂಬಿಕ ವಿಷಯಗಳೇ ಇಂದು ಆದ್ಯತೆ ಪಡೆಯುತ್ತವೆ. ಮನೆಯ ಸಮಸ್ಯೆ ಪರಿಹಾರ.  ಬಂಧುಗಳಿಂದ ಉತ್ತಮ ಸಹಕಾರ.

ಕಟಕ
ದೈನಂದಿನ ವ್ಯವಹಾರದ ಜತೆಗೇ ಇನ್ನಿತರ ಹಲವು ಕಾರ್ಯಗಳ ಒತ್ತಡ. ಅದನ್ನು ನಿಭಾಯಿಸುವಲ್ಲಿ ಸುಸ್ತಾಗುತ್ತೀರಿ. ವಿರಾಮರಹಿತ ದಿನ.

ಸಿಂಹ
ಕೆಲವು ಚಿಂತೆಗಳು ಕಾಡುತ್ತವೆ. ಅದಕ್ಕೆ ತಕ್ಷಣದ ಪರಿಹಾರವೂ ನಿಮ್ಮಲ್ಲಿಲ್ಲ. ಹಾಗೆಂದು ಹತಾಶೆ ಬೇಡ. ಸೂಕ್ತ ಕಾಲದಲ್ಲಿ ಸೂಕ್ತ ಪರಿಹಾರ ಸಿಗುವುದು.

ಕನ್ಯಾ
ಕೆಲಸದಲ್ಲಿ ಸವಾಲು ಹೆಚ್ಚು. ಆದರೂ ನೀವು ಅದನ್ನು ಸರಿಯಾಗಿ ನಿಭಾಯಿಸುವಿರಿ. ಹದತಪ್ಪಿದ ಮಾತಿನಿಂದ ಕೌಟುಂಬಿಕ ಅಸಮಾಧಾನ .

ತುಲಾ
ಉದ್ದೇಶಿತ ಗುರಿ ಸಾಧಿಸಲು ಇಂದು ಅಡ್ಡಿ ಒದಗುವುದು. ಇದರಿಂದ ನಿರಾಶೆ, ಉತ್ಸಾಹಭಂಗ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚೀತು.

ವೃಶ್ಚಿಕ
ಕುಟುಂಬಸ್ಥರ ಜತೆ ಅಥವಾ ಸ್ನೇಹಿತರ ಜತೆ ವಾಗ್ವಾದ ನಡೆದೀತು. ವೃತ್ತಿ ಕ್ಷೇತ್ರದಲ್ಲಿ ಅಸಹಕಾರ ಎದುರಿಸುವಿರಿ. ದೃಢ ನಿಲುವು ತಳೆಯಿರಿ.

ಧನು
ವೃತ್ತಿಯಲ್ಲಿ ಹೆಚ್ಚು ಜವಾಬ್ದಾರಿ. ಒತ್ತಡವೂ ಅಧಿಕ. ಇದು ನಿಮಗೆ ಉದ್ವಿಗ್ನತೆ ಸೃಷ್ಟಿಸುವುದು. ನಿಮ್ಮ ಕಾರ್ಯಕ್ಕೆ ಅಡ್ಡಿಯೂ ಉಂಟಾಗಲಿದೆ.

ಮಕರ
ಕೆಲಸದ ಹೊರೆ ಹೆಚ್ಚು. ಅದನ್ನು ಸಫಲವಾಗಿ ಸಾಧಿಸಲು ಇತರರ ಸಹಕಾರವೂ ಬೇಕಾಗುವುದು.  ದುಬಾರಿ ವಸ್ತು ಖರೀದಿ ಯೋಜನೆ ಫಲಿಸದು.

ಕುಂಭ
ಖರೀದಿಯ ಹುಮ್ಮಸ್ಸು ಹೆಚ್ಚು. ಆದರೆ ಮಿತಿಗಿಂತ ಹೆಚ್ಚು ಖರ್ಚು ಮಾಡದಿರಿ. ಇತರರ ಜತೆ ವ್ಯವಹರಿಸುವಾಗ ಸಹನೆ ಮುಖ್ಯ.

ಮೀನ
ಆರ್ಥಿಕವಾಗಿ ಮತ್ತು ಸಂಬಂಧದ ವಿಚಾರದಲ್ಲಿ ನಿಮಗೆ ಪೂರಕವಾದ ಬೆಳವಣಿಗೆಗಳು. ಆಪ್ತರಿಂದ ಬೆಂಬಲ, ಸಹಕಾರ. ಧನಲಾಭ. ಕಾರ್ಯಸಿದ್ಧಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!