ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಆತ್ಮೀಯರ ಜತೆಗಿನ ಸಂಬಂಧದಲ್ಲಿ ಬಿರುಕು ಮೂಡಿದ್ದರೆ ಅದು ಇಂದು ಸರಿ ಹೋಗುವುದು. ವಯಸ್ಸಾದವರಿಗೆ ಆರೋಗ್ಯ ಸಮಸ್ಯೆ.
ವೃಷಭ
ನಿಮ್ಮ ಮನಸ್ಸು ಉದ್ವಿಗ್ನಗೊಳಿಸುವ ಬೆಳವಣಿಗೆ ಸಂಭವಿಸಬಹುದು. ಶಾಂತಚಿತ್ತರಾಗಿ ನಿರ್ಧಾರ ತಾಳುವುದು ಇಂದು ಅತ್ಯವಶ್ಯ.
ಮಿಥುನ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಹೊಣೆಗಾರಿಕೆ ಹೆಚ್ಚಳ. ಬೇಕಾದ ಸಹಕಾರವೂ ದೊರಕುವುದಿಲ್ಲ.ಏಕಾಂಗಿಯಾಗಿಯೇ ಕಾರ್ಯವೆಸಗಿರಿ.
ಕಟಕ
ಸಂಗಾತಿ ಜತೆ ಭಿನ್ನಮತ ಸಂಭವ. ಖರ್ಚು ಹೆಚ್ಚಳ. ಸಹೋದ್ಯೋಗಿ ಜತೆ ಅಸಹಕಾರ ಮೂಡಬಹುದು. ಇದರಿಂದ ನಿಮ್ಮ ಕೆಲಸಕ್ಕೆ ತೊಂದರೆ.
ಸಿಂಹ
ಮನದ ಗೊಂದಲ ಮೊದಲು ನಿವಾರಿಸಿ. ನೀವು ಹಿಡಿಯಬೇಕಾದ ದಾರಿಯ ಕುರಿತಂತೆ ದ್ವಂದ್ವ ನಿವಾರಿಸಿ. ನಂತರ ಎಲ್ಲವೂ ಸರಿಯಾಗುವುದು.
ಕನ್ಯಾ
ನಿಮ್ಮ ಹಠಮಾರಿ ಧೋರಣೆ ಆಪ್ತರ ಜತೆ ಸಂಬಂಧ ಕೆಡಲು ಕಾರಣವಾಗಬಹುದು. ಹೊಂದಾಣಿಕೆ, ಇತರರ ಮಾತು ಕೇಳುವುದು ಕೂಡಾ ಅಗತ್ಯ .
ತುಲಾ
ಅಹಿತಕರ ಪ್ರಸಂಗ ಎದುರಿಸುವಿರಿ. ನಿಮ್ಮ ಕಾರ್ಯದಲ್ಲಿ ತಪ್ಪುಗಳು ಆಗದಂತೆ ಎಚ್ಚರ ವಹಿಸಿರಿ. ಹೊಸ ವ್ಯವಹಾರಕ್ಕೆ ಹಣ ಹೂಡದಿರಿ.
ವೃಶ್ಚಿಕ
ಕೆಲಸದ ಒತ್ತಡ ಕಡಿಮೆ. ಹಾಗಾಗಿ ಇಂದು ನಿರಾಳವಾಗಿ ಕಳೆಯುವಿರಿ. ಖಾಸಗಿ ನಿರ್ಧಾರ ತಾಳುವಾಗ ಭಾವುಕತೆಗಿಂತ ವಾಸ್ತವಕ್ಕೆ ಗಮನ ಕೊಡಿ.
ಧನು
ವೃತ್ತಿಯಲ್ಲಿ ಅತ್ಯಂತ ಸಫಲ ದಿನ. ನಿಮ್ಮ ಕಠಿಣ ಶ್ರಮಕ್ಕೆ ಸೂಕ್ತ ಪ್ರತಿಫಲ ಲಭ್ಯ. ಆರ್ಥಿಕ ವ್ಯವಹಾರದಲ್ಲಿ ಉತ್ತಮ ಫಲಿತಾಂಶ. ಒಟ್ಟಿನಲ್ಲಿ ತೃಪ್ತಿಕರ ದಿನ.
ಮಕರ
ಹೊಸದೇನಾದರೂ ಸಾಧಿಸುವ ಮನಸ್ಸಿದ್ದರೆ ಇಂದು ಅದಕ್ಕೆ ಸೂಕ್ತ ದಿನ. ನಿಮ್ಮ ಉತ್ಸಾಹ ಉತ್ತಮ ಫಲ ನೀಡುವುದು. ಕೌಟುಂಬಿಕ ಪರಿಸ್ಥಿತಿ ಸೌಹಾರ್ದಮಯ.
ಕುಂಭ
ನೀವು ಮತ್ತು ನಿಮ್ಮ ಕುಟುಂಬಸ್ಥರು ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾದ ಪ್ರಸಂಗ ಒದಗೀತು. ವಿವೇಚನೆಯಿಂದ ವರ್ತಿಸಿರಿ.
ಮೀನ
ಪ್ರಗತಿಪರ ದಿನ. ನಿಮ್ಮ ಕೆರಿಯರ್ ವೃದ್ಧಿಸುವ ಅವಕಾಶ ದೊರಕುವುದು. ಆಪ್ತರ ಜತೆ ಸಮಯ ಕಳೆಯುವ ಅವಕಾಶ. ಆರ್ಥಿಕ ಉನ್ನತಿ.