ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನೀವಿಂದು ಪ್ರಗತಿ ಕಾಣುವಿರಿ. ಕಾರ್ಯಸಿದ್ಧಿ. ಪ್ರೀತಿಪಾತ್ರರ ಭೇಟಿ. ನಿಮ್ಮ ಪಾಸಿಟಿವ್ ಚಿಂತನೆ ಉತ್ತಮ ಫಲ ನೀಡುವುದು.
ವೃಷಭ
ಕರ್ತವ್ಯ ನೆರವೇರಿಸಲು ಯಾವುದೇ ಅಡ್ಡಿ ಒದಗದು. ವಿರೋಧಗಳು ಕೊನೆಗೊಳ್ಳುತ್ತವೆ. ಹಣ ಗಳಿಕೆಯ ಹಾದಿ ಸುಗಮವಾಗಲಿದೆ.
ಮಿಥುನ
ಮನಶ್ಯಾಂತಿ ಕದಡುವ ಬೆಳವಣಿಗೆ. ಉದ್ದೇಶಿತ ಕಾರ್ಯ ಈಡೇರದು. ವಿವಾಹ ಸಂಬಂಧ ಕುದುರಿಸುವ ಕಾರ್ಯದಲ್ಲಿ ಅಡ್ಡಿಗಳು ಬರಲಿವೆ.
ಕಟಕ
ಮನಸ್ಸಿನ ಒತ್ತಡವು ದೈನಂದಿನ ಕರ್ತವ್ಯ ನೆರವೇರಿಸಲು ಅಡ್ಡಿ ತರುವುದು. ಏಕಾಗ್ರತೆ ಕಷ್ಟವಾಗುವುದು. ಸಂಬಂಧದಲ್ಲಿಯೂ ಬಿರುಕು ಉಂಟಾದೀತು.
ಸಿಂಹ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ನಿಮ್ಮ ಕಾರ್ಯವು ಅರ್ಧದಲ್ಲೆ ನಿಂತೀತು. ಆಹಾರದಲ್ಲಿ ಎಚ್ಚರ ವಹಿಸಿ. ಅಜೀರ್ಣದಂತ ಸಮಸ್ಯೆ ಕಾಡೀತು.
ಕನ್ಯಾ
ಆರ್ಥಿಕ ಒತ್ತಡ. ಮಾನಸಿಕ ಕಿರಿಕಿರಿ. ಇದು ನಿಮ್ಮ ನಡೆನುಡಿಯಲ್ಲಿ ಪ್ರತಿಫಲಿಸುವುದು. ಆಪ್ತರೊಂದಿಗೆ ಸಹನೆಯಿಂದ ವರ್ತಿಸಿ. ಬಂಧುತ್ವ ಕೆಡದಿರಲಿ.
ತುಲಾ
ಆರೋಗ್ಯಕ್ಕೆ ಹೆಚ್ಚು ಗಮನ ಕೊಡಿ. ಕೆಲವು ಸಂಕಷ್ಟಗಳು ಬರಬಹುದು. ಇದರಿಂದ ಮನಸ್ಸು ದೇವರು, ಅಧ್ಯಾತ್ಮದತ್ತ ವಾಲಬಹುದು.
ವೃಶ್ಚಿಕ
ವಿಶೇಷಗಳಿಲ್ಲದ ಸಾಮಾನ್ಯ ದಿನ. ವೃತ್ತಿಯಲ್ಲಿ ಕೆಲಸ ಕಡಿಮೆ. ಕೌಟುಂಬಿಕ ಕಾರ್ಯಗಳೂ ಹೆಚ್ಚು ಬಾಧಿಸಲಾರವು. ಬಂಧುಗಳ ಭೇಟಿ.
ಧನು
ಕೆಲವು ವಿಚಾರಗಳಲ್ಲಿ ನಿಮ್ಮ ಕ್ಷಿಪ್ರ ಪ್ರತಿಕ್ರಿಯೆ ಉತ್ತಮ ಫಲ ನೀಡಲಿದೆ. ಕೆಲವು ವಿಷಯ ನನೆಗುದಿಯಲ್ಲಿ ಇಡುವುದು ತರವಲ್ಲ ಎಂಬ ಅರಿವು ಆಗಲಿದೆ.
ಮಕರ
ಕೌಟುಂಬಿಕ ಬಿಕ್ಕಟ್ಟು ಪರಿಹರಿಸಲು ಮುಖ್ಯ ಗಮನ ಕೊಡಿ. ಅದನ್ನು ದೀರ್ಘ ಎಳೆಯಲು ಬಿಡಬೇಡಿ. ವಿವಾಹಿತ ದಂಪತಿಗೆ ಶುಭ ಬೆಳವಣಿಗೆ ಕಾಣಲಿದೆ.
ಕುಂಭ
ದೈಹಿಕ ನೋವಿನಿಂದ ಶಮನ ಪಡೆಯುವಿರಿ. ಮನೆಯಲ್ಲಿ ಹೆಚ್ಚಿನ ಹೊಣೆಗಾರಿಕೆಯಿಂದ ಮುಕ್ತಿ. ಕೆರಿಯರ್ನಲ್ಲಿ ಪ್ರಗತಿ. ಕೌಟುಂಬಿಕ ಸಹಕಾರ.
ಮೀನ
ಆರ್ಥಿಕ ಪರಿಸ್ಥಿತಿ ಸಮಾಧಾನಕರ. ಉಳಿತಾಯಕ್ಕೆ ಆದ್ಯತೆ ಕೊಡಿ. ಸಹೋದ್ಯೋಗಿಗಳ ಜತೆ ಅನವಶ್ಯ ವಾಗ್ವಾದಕ್ಕೆ ಇಳಿಯದಿರಿ.