ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಮುಖ್ಯ ಕಾರ್ಯದಲ್ಲಿ ನೀವು ನಿರೀಕ್ಷಿಸಿದ ಯಶಸ್ಸು ಇಂದು ದೊರಕುವುದು. ಆದರೆ ಯಶಸ್ಸಿನಿಂದ ಮೈಮರೆಯದಿರಿ. ಕೆಲಸ ಇನ್ನೂ ಉಳಿದಿದೆ.
ವೃಷಭ
ಆಪ್ತರೆನಿಸಿದವರ ಬಗ್ಗೆ ಶಂಕೆಗೊಳ್ಳುವ ಪ್ರಸಂಗ ಉದ್ಭವಿಸಬಹುದು. ಸರಿಯಾಗಿ ಪರಾಮರ್ಶೆ ನಡೆಸಿ. ಆತುರದಿಂದ ವರ್ತಿಸಬೇಡಿ. ಚಾಡಿ ಮಾತು ನಂಬದಿರಿ.
ಮಿಥುನ
ಅಧಿಕ ಕೆಲಸ, ಅಧಿಕ ಒತ್ತಡ. ಎಲ್ಲ ಕಾರ್ಯವನ್ನು ಮುಗಿಸಲು ಯತ್ನಿಸುವಿರಿ ಅಂತಿಮವಾಗಿ ಯಾವುದೇ ಕೆಲಸ ಸರಿಯಾಗಿ ನಡೆಯದು.
ಕಟಕ
ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿ. ಕೆಲವು ಸಮಸ್ಯೆಗಳು ನಿಮ್ಮನ್ನು ಆಧ್ಯಾತ್ಮಿಕದೆಡೆಗೆ ನೂಕಬಹುದು. ಕಷ್ಟಕ್ಕೆ ಅಂಜದಿರಿ, ಅದನ್ನು ಎದುರಿಸಿ.
ಸಿಂಹ
ವ್ಯವಹಾರದಲ್ಲಿ ಶುಭ ಸುದ್ದಿ. ನೀವು ನಿರೀಕ್ಷಿಸಿದಂತೆ ಕೆಲಸ ಸಾಗುವುದು. ಆದರೆ ಕೌಟುಂಬಿಕವಾಗಿ ಒತ್ತಡ. ಅವರ ಕೆಲವು ಬೇಡಿಕೆ ಅತಿಯೆನಿಸುವುದು.
ಕನ್ಯಾ
ಕೆಲವು ಬೆಳವಣಿಗೆ ನಿಮಗೆ ಹಿತ ತಾರದು. ಆದರೆ ಅದನ್ನು ಒಪ್ಪಿಕೊಂಡು ಸಾಗುವುದರಲ್ಲಿ ನಿಮ್ಮ ಹಿತವಿದೆ. ವಿನಾಕಾರಣ ಇತರರನ್ನು ಎದುರು ಹಾಕಿಕೊಳ್ಳದಿರಿ.
ತುಲಾ
ಯಾವುದೋ ವಿಷಯದಲ್ಲಿ ನಿಮ್ಮ ನಿಲುವು ಬದಲಿಸುವ ಪ್ರಸಂಗ ನಡೆದೀತು. ಇತರರ ನಿಲುವು ಒಪ್ಪಿಕೊಳ್ಳಬೇಕಾದೀತು. ಸಂಘರ್ಷ ಒಳಿತಲ್ಲ.
ವೃಶ್ಚಿಕ
ಸರಿಯಾದ ಯೋಜನೆಯಿಲ್ಲದೆ ನಿಮ್ಮ ಕೆಲಸ ಕೆಡಬಹುದು. ಕೆಲಸದಲ್ಲಿನ ತಪ್ಪು ಸರಿಪಡಿಸುವುದರಲ್ಲೇ ನಿಮ್ಮ ಹಿತವಿದೆ. ಅದಕ್ಕೆ ಮುಜುಗರ ಬೇಡ.
ಧನು
ವೃತ್ತಿಯಲ್ಲಿ ಬಿಕ್ಕಟ್ಟು. ಹಣಕಾಸು ಕೊರತೆ. ಇತರರ ಸಹಕಾರದಿಂದ ಅದನ್ನು ನಿಭಾಯಿ ಸುವಿರಿ. ಖಾಸಗಿ ಬದುಕಿನಲ್ಲಿ ಏರುಪೇರು. ದೊಡ್ಡ ನಿರಾಶೆ.
ಮಕರ
ನಿಮ್ಮ ಜನಪ್ರಿಯತೆ ಹೆಚ್ಚಿಸುವ ಬೆಳವಣಿಗೆ. ಸಾಮಾಜಿಕ ಕಾರ್ಯದಲ್ಲಿ ಯಶಸ್ಸು. ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಶೀಘ್ರ ನಿವಾರಣೆ.
ಕುಂಭ
ಹಣಕಾಸಿನ ಪರಿಸ್ಥಿತಿ ಚಿಂತೆಗೆ ಕಾರಣವಾಗುವುದು. ಉಳಿತಾಯ ಮಾಡುವ ಬಗ್ಗೆ ಯೋಜಿಸಿರಿ. ಅನವಶ್ಯ ವೆಚ್ಚ ಕಡಿಮೆ ಮಾಡಬೇಕು.
ಮೀನ
ಯಾವುದೇ ಹಿನ್ನಡೆ ನಿಮ್ಮನ್ನಿಂದು ಬಾಧಿಸದು. ಹಾಗಾಗಿ ಆ ಕುರಿತಾದ ಅಂಜಿಕೆ ಬಿಟ್ಟುಬಿಡಿ. ಆದರೆ ದಿನವಿಡಿ ನಿಮ್ಮ ಪಾಲಿಗೆ ನೀರಸವೆನಿಸುತ್ತದೆ.