ಮೇಷ
ಯಾವುದೇ ಒತ್ತಡವಿಲ್ಲದೆ ದಿನ ಕಳೆಯುವ ಉದ್ದೇಶ ನಿಮ್ಮದಾದರೂ ಅನಿರೀಕ್ಷಿತ ಒತ್ತಡಗಳು ತಲೆದೋರುತ್ತವೆ. ಇತರರ ಸಮಸ್ಯೆ ನಿಮ್ಮ ಹೆಗಲೇರುತ್ತದೆ.
ವೃಷಭ
ಸವಾಲುಗಳು ಎದುರಾದರೆ ಅದನ್ನು ನೀವೇ ಎದುರಿಸಬೇಕು. ಇತರರು ನೆರವಿಗೆ ಬರುತ್ತಾರೆಂದು ಕಾದು ಕೂತರೆ ನಿಮಗೆ ನಿರಾಶೆಯೇ ಕಾದಿದೆ.
ಮಿಥುನ
ಸಾಂಸಾರಿಕ ತಾಪತ್ರಯ ಕಾಡಬಹುದು. ಮನಸ್ಸಿಗೆ ಉದ್ವಿಗ್ನತೆ. ಆದರೆ ಸಂಜೆ ವೇಳೆಗೆ ಎಲ್ಲವೂ ನಿರುಮ್ಮಳವಾಗುವುದು. ವಿರೋಸುವವರು ಸಮಾಧಾನ ತಾಳುತ್ತಾರೆ.
ಕಟಕ
ಮನೆಯವರ ಮಾತಿಗೆ ಕಿವಿಗೊಡಿ. ವಿವಾದಗಳಿದ್ದರೆ ಸಂಧಾನದಿಂದ ಪರಿಹರಿಸಿ. ಬಂಧು ಗಳಿಂದ ಮಹತ್ವದ ಸುದ್ದಿ ಕೇಳುವಿರಿ.
ಸಿಂಹ
ದೇಹದ ಜಡತ್ವ ತೊರೆದು ಕಾರ್ಯ ನಿರ್ವಹಿಸಿ. ಇಲ್ಲವಾದರೆ ಮನಸ್ಸಿಗೂ ಜಡ ಹಿಡಿದೀತು. ಆತ್ಮೀಯರ ಜತೆಗೆ ಸಂಘರ್ಷ ನಡೆದೀತು. ಧನಹಾನಿ ಸಂಭವ.
ಕನ್ಯಾ
ಮನೆಯವರ ಜತೆ ಆರೋಪ ಪ್ರತ್ಯಾರೋಪಕ್ಕೆ ತೊಡಗದಿರಿ. ತಪ್ಪು ಘಟಿಸಿದ್ದರೆ ಅದನ್ನು ಪರಿಹರಿಸಲು ಆದ್ಯತೆ ಕೊಡಿ. ಸಹನೆ ಕಾಯುವುದು ಮುಖ್ಯ.
ತುಲಾ
ಆಪ್ತರ ಜತೆಗೆ ಇಂದು ಸಮಯ ಕಳೆಯುವ ಅವಕಾಶ. ಬಂಧುಗಳ ಭೇಟಿ. ಬಹುಕಾಲದ ಉದ್ದೇಶವೊಂದು ಈಡೇರುವುದು. ಆರ್ಥಿಕ ಲಾಭ.
ವೃಶ್ಚಿಕ
ನೆರೆಕರೆಯಲ್ಲಿ ಅಶಾಂತಿ ಅನುಭವಿಸುವಿರಿ. ಕೆಲವರ ಜತೆ ಮಾತಿನ ಚಕಮಕಿ ನಡೆದೀತು. ಕೌಟುಂಬಿಕ ಸಮಸ್ಯೆ ಯೊಂದು ಉದ್ವಿಗ್ನತೆಗೆ ಕಾರಣವಾದೀತು.
ಧನು
ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಪ್ರಮುಖ ವಿಷಯಗಳಲ್ಲಿ ಆತುರದ ತೀರ್ಮಾನ ತಳೆಯದಿರಿ. ಎಲ್ಲರ ಜತೆ ಸಮಾಲೋಚಿಸಿ ನಿರ್ಧಾರ ತಾಳಿ.
ಮಕರ
ಪ್ರಯಾಣ ಸಂಭವ. ಪ್ರಯಾಣದ ಉದ್ದೇಶ ಮಾತ್ರ ನೀವು ಭಾವಿಸಿದಂತೆ ನೆರವೇರದು. ಆರೋಗ್ಯ ಸಮಸ್ಯೆ ಕಾಡಬಹುದು. ಧನವ್ಯಯ.
ಕುಂಭ
ಗ್ರಹಗತಿಯು ಸಂಬಂಧ ದಲ್ಲಿ ಸುಧಾರಣೆ ತೋರಿಸುತ್ತದೆ. ಮನಸ್ತಾಪ ನಿವಾರಣೆ. ಮುನಿಸಿಕೊಂಡವರು ಹತ್ತಿರವಾಗುವರು. ಆರ್ಥಿಕ ಲಾಭ.
ಮೀನ
ಬದಲಾವಣೆ ಸಹಜ. ಅದಕ್ಕೆ ಹೊಂದಿಕೊಳ್ಳಬೇಕು. ಎಲ್ಲವನ್ನು ವಿರೋಸದಿರಿ. ಹೊಸ ವ್ಯವಹಾರದಲ್ಲಿ ದೊಡ್ಡ ಹೂಡಿಕೆ ಮಾಡದಿರಿ.