ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಇಂದಿನದು ಫಲಪ್ರದ ದಿನವಲ್ಲ. ಕಾರ್ಯಗಳು ಭಾಗಶಃ ನೆರವೇರುವವು. ಕೆಲವು ಕಾರ್ಯ ಅಪೂರ್ಣ. ಧಾರ್ಮಿಕ ವಿಚಾರದ ಕಡೆಗೆ ಮನಸ್ಸು .
ವೃಷಭ
ಸಮಸ್ಯೆಯೊಂದು ಮನದ ನೆಮ್ಮದಿ ಕೆಡಿಸುವುದು. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾರದ ಸಂಕಷ್ಟ. ತುಸು ಕಾಲ ಇದೇ ಸ್ಥಿತಿ ಇರಲಿದೆ.
ಮಿಥುನ
ಸಂಬಂಧದಲ್ಲಿ ಸಮಸ್ಯೆ ತೋರುವುದು. ಅದು ಉಲ್ಬಣಗೊಳ್ಳಲು ಅವಕಾಶ ಕೊಡದಿರಿ. ನೀವು ಹೊಂದಾಣಿಕೆಗೆ ಮುಂದಾಗಬೇಕು. ಸಂಘರ್ಷ ಒಳಿತಲ್ಲ.
ಕಟಕ
ಕೆರಿಯರ್‌ನಲ್ಲಿ ಪ್ರಗತಿ. ಉತ್ತಮ ಉದ್ಯೋಗ ಅವಕಾಶ. ಆರ್ಥಿಕ ಸ್ಥಿತಿ ಸುಧಾರಣೆ. ವಾಹನ ಚಲಾವಣೆಯಲ್ಲಿ ಎಚ್ಚರ ವಹಿಸಿ. ಅವಘಡ ತಪ್ಪಿಸಿರಿ.
ಸಿಂಹ
ಕೆಲಸದ ಒತ್ತಡದಿಂದ ಕುಟುಂಬವನ್ನು ಅವಗಣಿಸಬೇಡಿ. ಕುಟುಂಬಸ್ಥರ ಬೇಕುಬೇಡಗಳಿಗೆ ಗಮನ ಕೊಡಿ. ಆರ್ಥಿಕ ಮುಗ್ಗಟ್ಟು ಸಂಭವ.
ಕನ್ಯಾ
ನಿಗದಿತ ಸಮಯ ದೊಳಗೆ ಕೆಲಸ ಮುಗಿಸ ಬೇಕಾದ ಒತ್ತಡಕ್ಕೆ ಸಿಲುಕುವಿರಿ. ಇತರರ ಸಹಕಾರ ದೊರಕದು. ಮನೆಯಲ್ಲಿ ಅಸಮಾಧಾನ.
ತುಲಾ
ಕೆಲವು ವಿಷಯಗಳಲ್ಲಿ ನಿಮ್ಮ ಅಭಿಪ್ರಾಯ ವನ್ನು ಸ್ಪಷ್ಟವಾಗಿ ತಿಳಿಸಿ.ಇತರರ ಮನಸ್ಸು ನೋಯುವುದೆಂಬ ಭಯ, ಹಿಂಜರಿಕೆ ಬಿಟ್ಟುಬಿಡಿ.
ವೃಶ್ಚಿಕ
ನಿಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಳ್ಳು ವುದೇನೋ ಸರಿ. ಇದರಿಂದ ಮನೆಯಲ್ಲಿ ಸಾಮರಸ್ಯ ಹಾಳಾ ದೀತು. ಕಠಿಣ ನಿಲುವಲ್ಲಿ ಸಡಿಲಿಕೆ ಒಳಿತು.
ಧನು
ಸಣ್ಣಪುಟ್ಟ ಸಂಘರ್ಷ ತಪ್ಪಿಸಿ. ಇಲ್ಲವಾದರೆ ನಿಮ್ಮ ಮನಶ್ಯಾಂತಿ ಹಾಳು. ನಿಮ್ಮ ಸುತ್ತಲಿನ ವ್ಯಕ್ತಿಗಳು ನಿಮಗೆ ಅಸಹನೆ ತರುವ ರೀತಿ ವರ್ತಿಸುತ್ತಾರೆ.
ಮಕರ
ಕೆಲವು ಬೆಳವಣಿಗೆ ನಿಮ್ಮ ಆತ್ಮವಿಶ್ವಾಸ ಕುಂದಿಸುವುದು. ನಿಜವಾಗಿ ನೀವು ಹೆದರಬೇಕಿಲ್ಲ, ಎಲ್ಲವೂ ನಿಮ್ಮ ಪರವಾಗಿ ಸಾಗುವುದು.
ಕುಂಭ
ಯಾವುದೇ ಸವಾಲು ಎದುರಿಸಬಲ್ಲ ಮನೋ ಬಲ ಪ್ರದರ್ಶಿಸುವಿರಿ. ಅದರಲ್ಲೆ ನಿಮ್ಮ ಯಶಸ್ಸೂ ಅಡಗಿದೆ. ಮನಶ್ಶಾಂತಿ. ಆರ್ಥಿಕ ಲಾಭ.
ಮೀನ
ನಿಮ್ಮ ಮಾನಸಿಕ ದೃಢತೆಯು ಸಮಸ್ಯೆ ನಿವಾರಣೆಗೆ ನೆರವು ನೀಡುವುದು. ಮನೆಯಲ್ಲಿ ಶಾಂತಿ, ಸಾಮರಸ್ಯ. ಹಣಕಾಸು ವಿಚಾರ ತೃಪ್ತಿಕರ.