ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಸಹೋದ್ಯೋಗಿಗಳಿಂದ ಸಮಸ್ಯೆ ಸೃಷ್ಟಿ. ಅವರೊಂದಿಗೆ ಹೊಂದಾಣಿಕೆ ಒಳಿತು. ಆವೇಶದ ಪ್ರತಿಕ್ರಿಯೆ ನೆಮ್ಮದಿ ಹಾಳು ಮಾಡಬಹುದು.
ವೃಷಭ
ಎಂತಹ ಪ್ರತಿಕೂಲ ಪರಿಸ್ಥಿತಿಯನ್ನೂ ನಿಭಾಯಿಸುವ ಮನಸ್ಥಿತಿ ಇಂದು ನಿಮ್ಮದು. ಅದರಿಂದ ಕಾರ್ಯಗಳು ಸಾಧಿತ. ಸಂಬಂಧ ಸುಧಾರಣೆ.
ಮಿಥುನ
ಸಂಗಾತಿ ಜತೆ ಆರೋಗ್ಯಕರ ಸಂಬಂಧ ಬೆಳೆಸಿ. ಅಹಂ ವರ್ತನೆ ಸಂಘರ್ಷಕ್ಕೆ ಕಾರಣವಾಗುವುದು.ಹೆಚ್ಚು ಹಣ ಗಳಿಸುವ ಯೋಜನೆ ಫಲಿಸದು.
ಕಟಕ
ವೃತ್ತಿಯಲ್ಲಿ ಹೆಚ್ಚುವರಿ ಜವಾಬ್ದಾರಿ. ಬಿಡುವಿಲ್ಲದ ಕಾರ್ಯ. ನಿಮ್ಮ ಅಭಿಪ್ರಾಯ ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಕೆ ಬೇಡ.ಅದರಿಂದ ಭಿನ್ನಮತ ನಿವಾರಣೆ.
ಸಿಂಹ
ಮನಸ್ಸನ್ನು ಕಾಡುವ ಭಾವನೆಗಳನ್ನು ಸಂಬಂಧಿಸಿದವರ ಜತೆ ಹಂಚಿಕೊಳ್ಳಿ. ಅದಕ್ಕೆ ಹಿಂಜರಿಕೆ ಬೇಡ. ಸೂಕ್ತ ಪ್ರತಿಸ್ಪಂದನೆ ನಿಮಗೆ ಸಿಗುವುದು.
ಕನ್ಯಾ
ಎಲ್ಲ ವಿಚಾರಗಳಲ್ಲಿ ಇಂದು ಎಚ್ಚರಿಕೆ ವಹಿಸಿ.ನೀವೆಸಗುವ ತಪ್ಪು ದೊಡ್ಡ ಪರಿಣಾಮ ಉಂಟು ಮಾಡಬಹುದು. ಹೊಂದಾಣಿಕೆ ಅವಶ್ಯ.
ತುಲಾ
ಇಂದಿನ ಕಾರ್ಯಗಳೆಲ್ಲ ಪರಿಪೂರ್ಣವಾಗಿ ಸಾಗುವವು. ಯಾವುದೇ ಅಡೆತಡೆ ಬಾಧಿಸದು. ಮನೆಯಲ್ಲಿ ಸೌಹಾರ್ದ ವಾತಾವರಣ. ಬಂಧುಗಳ ಭೇಟಿ.
ವೃಶ್ಚಿಕ
ನೆಗೆಟಿವ್ ಚಿಂತನೆಗಳು ಬಾಧಿಸಬಹುದು.ಅದರಿಂದ ನಿಮಗೆ ಯಾವುದೇ ಕಾರ್ಯ ಸಾಧಿತವಾಗದು.ಮೊದಲು ಮನಸ್ಥಿತಿ ಬದಲಿಸಿಕೊಳ್ಳಿ.
ಧನು
ಪ್ರೀತಿ ಅಥವಾ ವಿವಾಹ ಸಂಬಂಧ ಬೆಳೆಸುವ ವಿಚಾರದಲ್ಲಿ ಇಂದು ಸಕಾರಾತ್ಮಕ ಬೆಳವಣಿಗೆ. ಅಡೆತಡೆ ನಿವಾರಣೆ. ಆದಾಯಕ್ಕಿಂತ ಖರ್ಚು ಅಧಿಕವಾಗುವುದು.
ಮಕರ
ಸಂಬಂಧದಲ್ಲಿ ನೈತಿಕ ನಿಯಮ ಪಾಲಿಸಿ.ಇಲ್ಲವಾದರೆ ಬಂಧುತ್ವ ಹಾಳಾದೀತು. ಯಾರದೋ ಚಿತಾವಣೆಗೆ ಒಳಗಾಗದಿರಿ. ವದಂತಿ ನಂಬಬೇಡಿ.
ಕುಂಭ
ವೃತ್ತಿಯಲ್ಲಿ ಉನ್ನತಿ. ಹಣದ ವಿಷಯದಲ್ಲಿ ಪೂರಕ ಬೆಳವಣಿಗೆ. ಖರ್ಚು ನಿಯಂತ್ರಿಸಲು ಗಮನ ಕೊಡಿ. ವ್ಯಕ್ತಿಯೊಬ್ಬರಿಂದ ಮಾನಸಿಕ ಕಿರಿಕಿರಿ.
ಮೀನ
ಬೆಳಗಿನಿಂದಲೇ ಒತ್ತಡ. ಯಾವುದೇ ಕಾಯ ಸುಲಲಿತವಾಗಿ ಸಾಗದು. ಕೆಲವು ವ್ಯಕ್ತಿಗಳೂ ನಿಮ್ಮ ನೆಮ್ಮದಿ ಕೆಡಿಸುತ್ತಾರೆ.ಅವರಿಂದ ದೂರವಿರುವುದೇ ಲೇಸು