ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕೆಲಸದಲ್ಲಿ ಹಿರಿಯ ವ್ಯಕ್ತಿಗಳ ಜತೆ ವಿಧೇಯರಾಗಿರಿ. ಅಸಹನೆ, ಅಸಮಾಧಾನ ತೋರದಿರಿ. ಆರ್ಥಿಕ ವಿಷಯ ತುಸು ಚಿಂತೆಗೆ ಕಾರಣವಾದೀತು.
ವೃಷಭ
ನಿಮ್ಮ ಕಾರ್ಯವು ಕಠಿಣವೆನಿಸಿದರೂ ಅಂತಿಮವಾಗಿ ಉತ್ತಮ ಫಲ ದೊರಕುವುದು. ಹೊಸ ಉದ್ಯೋಗದ ಅವಕಾಶ ದೊರಕಬಹುದು.
ಮಿಥುನ
ನಿಮ್ಮ ಭಾವನೆಯನ್ನು ಆಪ್ತರ ಜತೆ ಹಂಚಿಕೊಳ್ಳಲು ಹಿಂದೆ ಮುಂದೆ ನೋಡಬೇಡಿ. ಅವರಿಂದ ಸೂಕ್ತ ಸ್ಪಂದನೆ ದೊರಕಬಹುದು. ಖರ್ಚು ಹೆಚ್ಚಳ.
ಕಟಕ
ಉದಾಸೀನತೆ ಬಿಡಿ. ಮಾಡಬೇಕಾದ ಕಾರ್ಯ ಇಂದೇ ಮಾಡಿ. ಉತ್ಸಾಹ ಕಾಯ್ದುಕೊಳ್ಳಲು ವ್ಯಾಯಾಮ, ಯೋಗ ನೆರವಾದೀತು. ಬಂಧುಗಳ ಪ್ರೋತ್ಸಾಹ.
ಸಿಂಹ
ಸಂಬಂಧದ ವಿಚಾರದಲ್ಲಿ ಇತರರ ಮೇಲೆ ಆರೋಪ ಹೊರಿಸುವ ಮೊದಲು ನಿಮ್ಮನ್ನು ಪರಾಮರ್ಶಿಸಿಕೊಳ್ಳಿ. ವಾಗ್ವಾದದಿಂದ ದೂರವಿರಿ.
ಕನ್ಯಾ
ಗ್ರಹಗತಿಗಳು ನಿಮ್ಮ ಮಾನಸಿಕ ಶಾಂತಿಗೆ ಪೂರಕವಾಗಿವೆ. ಅಶಾಂತಿ ನಿವಾರಣೆ. ವಿಘ್ನ ಪರಿಹಾರ. ಕೆಲಸ ಕಾರ್ಯ ಸುಸೂತ್ರ. ಫಲಪ್ರದ ದಿನವಿದು.
ತುಲಾ
ನಿಮ್ಮ ಮಾತು, ವರ್ತನೆ ಇತರರ ಮೇಲೆ ಪ್ರಭಾವ ಬೀರಬಹುದು. ವಿರೋಧಿಗಳೂ ನಿಮ್ಮ ಸಮೀಪವಾಗುವರು. ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ.
ವೃಶ್ಚಿಕ
ಹೊಸ ಆರ್ಥಿಕ ಯೋಜನೆಗೆ ಕೈ ಹಾಕದಿರಿ. ಅದರಿಂದ ನಿಮಗೆ ಫಲ ಸಿಗಲಾರದು. ಹಣದ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಿರಿ. ಕೌಟುಂಬಿಕ ಒತ್ತಡ ಅಧಿಕ.
ಧನು
ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ದುಡುಕಿನ ಮಾತು ವಿರಸ ಮೂಡಿಸದಂತೆ ಎಚ್ಚರ ವಹಿಸಿ. ಆರ್ಥಿಕ ಚಿಂತೆಯೊಂದು ಪರಿಹಾರ ಕಾಣುವುದು.
ಮಕರ
ಬಂಧುಗಳ ಜತೆ ಹೆಚ್ಚು ಆತ್ಮೀಯವಾಗಿ ವರ್ತಿಸಿರಿ. ಅವರನ್ನು ದೂರ ಮಾಡಲು ಹೋಗಬೇಡಿ. ಕೆಲವರ ಮಾತು ನಿಮಗೆ ನೋವು ತರಬಹುದು.
ಕುಂಭ
ದೊಡ್ಡ ಮಟ್ಟದ ಹಣ ಹೂಡಿಕೆ ಮಾಡದಿರಿ. ಅದು ನಿರೀಕ್ಷಿತ ಫಲ ನೀಡಲಾರದು. ನಿಮ್ಮ ಕಾರ್ಯಕ್ಕೆ ಇತರರನ್ನು ಅವಲಂಬಿಸದಿರಿ. ನೀವೇ ಮಾಡಿರಿ.
ಮೀನ
ಬದಲಾವಣೆ ಜಗದ ನಿಯಮ. ಅದನ್ನು ಅರಿತು ವ್ಯವಹರಿಸಿರಿ. ಕೆಲವು ವಿಷಯ ಬದಲಾಗಲೇ ಬಾರದು ಎಂಬ ನಿಲುವು ತೊರೆಯಿರಿ.