ಮೇಷ
ಸಂಬಂಧದಲ್ಲಿ ಒತ್ತಡ ತಂತ್ರ ಅನುಸರಿಸದಿರಿ. ಹೊಂದಾಣಿಕೆ ಒಳ್ಳೆಯದು. ಅಸಹನೆಯನ್ನು ತಾಳ್ಮೆಯಿಂದ ಗೆಲ್ಲಿರಿ.
ವೃಷಭ
ಹೆಚ್ಚು ಗಂಭೀರವಾಗಿ ಕೆಲಸದಲ್ಲಿ ತೊಡಗಿಕೊಳ್ಳುತ್ತೀರಿ. ನಿಮ್ಮ ಬಿಗಿ ನಡವಳಿಕೆ ಇತರರಿಗೆ ಅಚ್ಚರಿ ತರಬಹುದು. ಕೌಟುಂಬಿಕ ನೆಮ್ಮದಿ.
ಮಿಥುನ
ಯಾವುದೇ ಕೆಲಸದಲ್ಲಿ ನಿಮಗಿಂದು ಯಶಸ್ಸು ಕಾದಿದೆ. ಗ್ರಹಗತಿ ನಿಮಗೆ ಪೂರಕವಾಗಿದೆ. ಕುಟುಂಬದಲ್ಲಿಯೂ ಸಹಕಾರ ಮತ್ತು ಸಂತೋಷ.
ಕಟಕ
ವೃತ್ತಿಯಲ್ಲಿ ಉಂಟಾ ಗಿದ್ದ ಒತ್ತಡಗಳು ಇಂದು ನಿವಾರಣೆಯಾಗಲಿವೆ. ಮನಸ್ಸಿಗೆ ತುಸು ನಿರಾಳತೆ . ಧಾರ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಮೂಡುವುದು.
ಸಿಂಹ
ನಿಮಗಿಂದು ಎಲ್ಲೆಡೆ ಯಿಂದ ಮನ್ನಣೆ ಸಿಗುವ ದಿನ. ಖಾಸಗಿ ಮತ್ತು ವೃತ್ತಿಪರ ಬದುಕುಗಳೆರಡಲ್ಲೂ ಯಶಸ್ಸು. ಬಂಧುತ್ವ ವೃದ್ಧಿಯಾಗಲಿದೆ.
ಕನ್ಯಾ
ವೈರುಧ್ಯಮಯ ಭಾವನೆಗಳಿಗೆ ಈಡಾಗುತ್ತೀರಿ. ಕೌಟುಂಬಿಕ ವಿಚಾರಗಳು ನಿಮ್ಮ ಮನಸ್ಸು ಕೊರೆಯುತ್ತದೆ.
ತುಲಾ
ಸಂಬಂಧ ವೃದ್ಧಿ. ಈ ನಿಟ್ಟಿನಲ್ಲಿ ಬಿಕ್ಕಟ್ಟುಗಳು ಪರಿಹಾರ. ಆರೋಗ್ಯದ ಬಗ್ಗೆ ತುಸು ಎಚ್ಚರ ವಹಿಸಿ. ಸಣ್ಣಪುಟ್ಟ ದೈಹಿಕ ತೊಂದರೆ ಕಾಣಿಸಿಕೊಳ್ಳಬಹುದು.
ವೃಶ್ಚಿಕ
ನಿಮ್ಮ ಜೀವನಶೈಲಿಯಲ್ಲಿ ಅಥವಾ ನಿಮ್ಮ ಚಿಂತನೆ ಯಲ್ಲಿ ಬದಲಾವಣೆ ಮಾಡಿಕೊಳ್ಳ ಬೇಕಾದೀತು. ಸಂಘರ್ಷಕ್ಕೆ ಆಸ್ಪದ ಕೊಡದಿರಿ.
ಧನು
ಒತ್ತಡ ,ಹೊಣೆಗಾರಿಕೆ ಹಗುರವಾಗಲಿದೆ. ಪ್ರೀತಿಯಲ್ಲಿ ಮಹತ್ತರ ಬೆಳವಣಿಗೆ. ಆಪ್ತರ ಸಂಗದಲ್ಲಿ ಸಂತೋಷ ಕಾಣುತ್ತೀರಿ. ಮಾನಸಿಕ ಶಾಂತಿ, ನೆಮ್ಮದಿ.
ಮಕರ
ಪ್ರಮುಖ ನಿರ್ಧಾರ ತೆಗೆದುಕೊಳ್ಳುವು ದಾದರೆ ಯೋಚಿಸಿ ತೆಗೆದುಕೊಳ್ಳಿ. ದುಡುಕಿನಿಂದ ಹಾನಿ ಮಾಡಿಕೊಳ್ಳುತ್ತೀರಿ. ಕೌಟುಂಬಿಕ ಬಿಕ್ಕಟ್ಟು.
ಕುಂಭ
ಕೆಲವು ಅನಿರೀಕ್ಷಿತ ಕಾರ್ಯಗಳು ಹೆಗಲೇ ರಲಿವೆ. ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆ. ಇದರಿಂದ ಕೌಟುಂಬಿಕ ಕಾರ್ಯ ಗಳಿಗೆ ತೊಡಕು.
ಮೀನ
ಬಂಧುಗಳಿಂದ ಶುಭ ಸುದ್ದಿ. ಹಣಕಾಸಿನ ವಿಷಯ ದಲ್ಲಿ ಎಚ್ಚರ. ದುಡ್ಡು ಕೊಟ್ಟು ಮೋಸ ಹೋಗುವ ಸಂಭವವಿದೆ. ಕೌಟುಂಬಿಕ ಶಾಂತಿ.