ದಿನಭವಿಷ್ಯ| ಕೆಲ ರಾಶಿಯವರಿಗಿಂದು ವೃತ್ತಿ ಬದುಕಿನಲ್ಲಿ ಹಿನ್ನಡೆ ಸಾಧ್ಯತೆ

ಮೇಷ
ಒಂದು ಸಮಸ್ಯೆ ಪರಿಹಾರವಾಯಿತು ಎಂದುಕೊಂಡಾಗ ಮತ್ತೊಂದು ಸಮಸ್ಯೆ ಉಂಟಾದೀತು. ನಿರಾಳತೆಯೆಂಬುದು ಇಂದು ಸಿಗಲಾರದು.

ವೃಷಭ
ವೃತ್ತಿಯಲ್ಲಿ ಹೊಣೆಗಾರಿಕೆ ಹೆಚ್ಚಳ. ಅಹಂ ಬಿಟ್ಟು ಇತರರ ಸಹಾಯ ಪಡೆದೇ ಮುಂದುವರಿಯಿರಿ. ಕೌಟುಂಬಿಕ ಪರಿಸರ ನೆಮ್ಮದಿ ತರುವುದು.

ಮಿಥುನ
ಹಳೆ ನೆನಪು ಕೆದಕುವ ವ್ಯಕ್ತಿಗಳ ಭೇಟಿ ಆಗಬಹುದು. ಕೌಟುಂಬಿಕ ವಿಚಾರಗಳು  ಮನಸ್ಸಿಗೆ ಕ್ಷೋಭೆ ಉಂಟು ಮಾಡೀತು. ಆರ್ಥಿಕ ಒತ್ತಡ.

ಕಟಕ
ಕುಟುಂಬಸ್ಥರ ಸಂಗದಲ್ಲಿ ಸಂತೋಷ ಪಡುವಿರಿ. ಅವರಿಂದ ಕೊಡುಗೆ ಪಡೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ನಿಮಗೆ ಪೂರಕ ಬೆಳವಣಿಗೆ.

ಸಿಂಹ
ಹೆಚ್ಚು ಹೊಣೆಗಾರಿಕೆ ಇಂದು ನಿಮ್ಮ ಮೇಲಿರದು. ಹಾಗಾಗಿ ಬಾಕಿ ಉಳಿದಿರುವ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಮಿತ್ರರಿಂದ ಕಿರಿಕಿರಿ.

ಕನ್ಯಾ
ಹಣದ ವಿಷಯದಲ್ಲಿ ಮುಖ್ಯ ನಿರ್ಧಾರ ತಾಳದಿರಿ. ಅದನ್ನು ಮುಂದೂಡಿ. ವೃತ್ತಿಯಲ್ಲಿ ಸಹನೆಯಿಂದ ವರ್ತಿಸಿ. ಅನವಶ್ಯ ವಾಗ್ವಾದಕ್ಕೆ ಎಡೆಮಾಡಿಕೊಡದಿರಿ.

ತುಲಾ
ಖಾಸಗಿ ಬದುಕಿಗೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳಬೇಕಾದ ಪ್ರಸಂಗ. ಈ ನಿರ್ಧಾರ ಇತರರ ಮೇಲೂ ಪರಿಣಾಮ ಬೀರಬಹುದು.

ವೃಶ್ಚಿಕ
ಕೆಲವು ವಿಷಯಗಳನ್ನು ಕೇವಲ ಭಾವುಕರಾಗಿ ಪರಿಗಣಿಸದಿರಿ. ತಾರ್ಕಿಕ ನೆಲೆಯಿಂದ ಯೋಚಿಸಿ. ಅದರಿಂದ ನಿಮಗಾಗುವ ನೋವು ತಪ್ಪಿಸಬಹುದು. ಕೌಟುಂಬಿಕ ಕಲಹ.

ಧನು
ನಿಮ್ಮ ವೃತ್ತಿಯಲ್ಲಿನ ಸಫಲತೆಗೆ ಕೌಟುಂಬಿಕ ಬೆಂಬಲ ಕೂಡ ಅಗತ್ಯ. ಕುಟುಂಬಸ್ಥರ ಸಹಕಾರ ಕೋರಲು ಹಿಂಜರಿಯದಿರಿ. ಆರ್ಥಿಕ ಲಾಭ.

ಮಕರ
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುವುದು. ಖರ್ಚುಗಳನ್ನು ತಗ್ಗಿಸಲು ನೀವೂ ಗಮನ ಕೊಡಿ. ಪ್ರೀತಿಯ ವಿಷಯದಲ್ಲಿ ನಿರಾಶೆ ಸಂಭವ.

ಕುಂಭ
ಹೆಚ್ಚು ಪಾಸಿಟಿವ್ ಚಿಂತನೆಯಿಂದ ಕಾರ್ಯಾಚರಿಸಿ. ಅದರಿಂದ ಫಲವಿದೆ. ಎಲ್ಲವನ್ನೂ ಸಿನಿಕತನ ದಿಂದ ನೋಡದಿರಿ. ಆರ್ಥಿಕ ಕೊರತೆ.

ಮೀನ
ನಿಮಗಿಂದು ಪೂರಕ ದಿನ. ಖಾಸಗಿಯಾಗಿ ಮತ್ತು ವೃತ್ತಿಯಲ್ಲಿ ನಿಮಗೆ ಅನುಕೂಲ ಬೆಳವಣಿಗೆ. ಸಂಗಾತಿ ಜತೆಗೆ ಉತ್ತಮ ಸಂವಹನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!