ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮಗೆ ಸಂಬಂಧ ಪಡದ ವಿಚಾರದಲ್ಲಿ ಅತಿಯಾಗಿ ಚಿಂತಿಸಿ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಇತರರ ವಿಷಯಕ್ಕೆ ತಲೆ ಹಾಕದಿರಿ. ಬಂಧುಗಳಿಂದ ಟೀಕೆ.
ವೃಷಭ
ವ್ಯಕ್ತಿಯೊಬ್ಬರ ಕುರಿತು ದ್ವೇಷ ಭಾವನೆ ತ್ಯಜಿಸುವುದು ಒಳಿತು. ಅವರಿಂದಾಗಿ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಿದೆ. ಶಾಂತ ಮನಸ್ಥಿತಿ ಮುಖ್ಯ.
ಮಿಥುನ
ಮನೆಯಲ್ಲಿನ ಬೆಳವಣಿಗೆ ನಿಮ್ಮ ವೃತ್ತಿಯ ಮೇಲೂ ಪರಿಣಾಮ ಬೀರುವುದು. ವಾಗ್ವಾದದಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಬಂಧುಗಳ ಭೇಟಿ.
ಕಟಕ
ಸಂಬಂಧದಲ್ಲಿ ಸೌಹಾರ್ದ ಕಾಪಾಡಲು ಆದ್ಯತೆ ಕೊಡಿ. ನಿಮ್ಮ ಮಾತು, ವರ್ತನೆ ತಪ್ಪರ್ಥ ಮೂಡಿಸದಂತೆ ಎಚ್ಚರ ವಹಿಸಿರಿ. ಆರ್ಥಿಕ ಒತ್ತಡ ಹೆಚ್ಚು.
ಸಿಂಹ
ಉದ್ದೇಶಿತ ಗುರಿ ಸಾಧಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ನಿಮ್ಮ ಜೀವನಶೈಲಿ ಆರೋಗ್ಯ ಕೆಡಿಸದಂತೆ ನೋಡಿಕೊಳ್ಳಿ.
ಕನ್ಯಾ
ನಿರಾಳ ದಿನ. ಸಮಸ್ಯೆ ಕಾಡಲಾರದು. ಉದ್ಯೋಗದಲ್ಲಾಗಲಿ, ಮನೆಯಲ್ಲಾಗಲಿ ನೀವು ಬಯಸಿದಂತೆ ಸಾಗುವುದು. ಬಂಧುಗಳ ಸಹಕಾರ.
ತುಲಾ
ಹಣದ ವಿಚಾರಕ್ಕೆ ಸಂಬಂಧಿಸಿ ಇಂದು ಹಿನ್ನಡೆ ಅನುಭವಿಸುವಿರಿ. ಕೌಟುಂಬಿಕ ಸಂಬಂಧದಲ್ಲೂ ಸಮಸ್ಯೆ ಉಂಟಾದೀತು. ತಾಳ್ಮೆಯಿಂದ ವ್ಯವಹರಿಸಿ.
ವೃಶ್ಚಿಕ
ವೃತ್ತಿಯಲ್ಲಿ ಮುಖ್ಯ ನಿರ್ಧಾರ ತಾಳುವ ಮುನ್ನ ಎಲ್ಲವನ್ನೂ ಪರಾಮರ್ಶಿಸಿ. ಇತರರಿಂದ ಬಯಸಿದ ಸಹಕಾರ ಸಿಗಲಾರದು. ಆರ್ಥಿಕ ಒತ್ತಡ.
ಧನು
ಸವಾಲುಗಳಿಗೆ ಅಂಜದಿರಿ. ಅದನ್ನು ದಿಟ್ಟವಾಗಿ ಎದುರಿಸಿ. ನೆಗೆಟಿವ್ ಚಿಂತನೆ ತುಂಬುವ ವ್ಯಕ್ತಿಗಳಿಂದ ದೂರವಿರಿ. ಕೌಟುಂಬಿಕ ಸಹಕಾರ ಲಭ್ಯ.
ಮಕರ
ನೀವು ಬಯಸಿದ ಕಾರ್ಯ ಇಂದು ಸಾಧ್ಯವಾಗದು. ಸ್ವಲ್ಪ ಕಾಲ ಕಾದು ನೋಡಿ. ಒತ್ತಡವು ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನೋಡಿ.
ಕುಂಭ
ಏರುಪೇರು ತುಂಬಿದ ದಿನ. ಹಾಗೆಂದು ಇದು ನಿಮ್ಮ ಉತ್ಸಾಹ ಕುಂದಿಸದು. ದಿನದಂತ್ಯಕ್ಕೆ ಎಲ್ಲ ಸಮಸ್ಯೆ ಪರಿಹರಿಸಿ ಕೊಳ್ಳುವಿರಿ. ಸಾಂಸಾರಿಕ ಬೇಗುದಿ ಶಮನ.
ಮೀನ
ಬಂಧುಗಳ ಜತೆ ಜಗಳ. ಸಮಾಧಾನದಿಂದ ಪರಿಹರಿಸಿ. ಪ್ರಮುಖ ವಿಚಾರದಲ್ಲಿ ನಿಮ್ಮ ನಿರ್ಧಾರ ನಿರೀಕ್ಷಿಸಿದ ಫಲ ನೀಡಲಾರದು. ಅದರಿಂದ ನಿರಾಶೆ.