ನಿಮ್ಮ ಕ್ರಿಯಾಶೀಲತೆಗೆ ಉತ್ತಮ ಫಲ ದೊರಕುವುದು. ಸಹೋದ್ಯೋಗಿಗಳ ಜತೆ ಮಾತಿನ ಚಕಮಕಿಗೆ ಇಳಿಯಬೇಡಿ. ಸಹನೆ ಕಾಯ್ದುಕೊಳ್ಳಿ.
ವೃಷಭ
ಕೌಟುಂಬಿಕ ವಿಷಯ ಗಳಿಗೆ ಇಂದು ಹೆಚ್ಚು ಗಮನ ಕೊಡಬೇಕು. ಆರೋಗ್ಯ ಸಮಸ್ಯೆ ಬಾಧಿಸಬಹುದು. ಆಹಾರ ಹಿತಮಿತ ಆಗಿರಲಿ.
ಮಿಥುನ
ಇಂದಿನದು ನಿಮಗೆ ಶುಭದಿನ. ಹೊಣೆಗಾರಿಕೆ ಕಡಿಮೆ. ಒತ್ತಡಗಳು ನಿವಾರಣೆ. ವಿವಾಹಾಕಾಂಕ್ಷಿಗಳಿಗೆ ಪೂರಕ ಬೆಳವಣಿಗೆ. ಕೌಟುಂಬಿಕ ಶಾಂತಿ.
ಕಟಕ
ಕೆಲವರ ಮಾತಿನಿಂದ ಬೇಗ ಘಾಸಿಗೊಳ್ಳುತ್ತೀರಿ. ಮನಸ್ಸು ದೃಢಪಡಿಸುವ ಅಗತ್ಯವಿದೆ. ಅತಿಯಾದ ಭಾವುಕತೆ ಒಳಿತು ತರದು. ತಾರ್ಕಿಕವಾಗಿ ಚಿಂತಿಸಿ.
ಸಿಂಹ
ಕೆಲಸದಲ್ಲಿ ಕಠಿಣ ದಿನ. ಯಾವುದೂ ಸುಗಮವಾಗಿ ಸಾಗದು. ಒಳ್ಳೆಯ ಅವಕಾಶ ಕೈತಪ್ಪುವುದು. ಕುಟುಂಬಸ್ಥರಿಂದ ಕಿರಿಕಿರಿ ಸಂಭವ.
ಕನ್ಯಾ
ಏರುಪೇರಿನ ದಿನ. ಕೆರಿಯರ್‌ನಲ್ಲಿ ಪ್ರಗತಿ ಉಂಟಾಗುವುದು. ಆದರೆ ಪ್ರೀತಿಯ ವಿಷಯದಲ್ಲಿ ಹಿನ್ನಡೆ ಕಾಣುವಿರಿ. ಕೌಟುಂಬಿಕ ಅಸಮಾಧಾನ.
ತುಲಾ
ಒತ್ತಡದ ದಿನ. ಹಾಗಾಗಿ ಅಸಹನೆಯು ಹೆಚ್ಚು. ಆಪ್ತರ ಮೇಲೂ ರೇಗುವ ಸಂಭವವಿದೆ. ಸಂಯಮ ಉಳಿಸಿಕೊಳ್ಳುವುದು ಅವಶ್ಯ. ಖರ್ಚು ಹೆಚ್ಚುವ ಸಾಧ್ಯತೆ.
ವೃಶ್ಚಿಕ
ಹಣಕಾಸು ವಿಚಾರದಲ್ಲಿ ಇಂದು ತಲೆಕೆಡಿಸಿಕೊಳ್ಳುವ ಪ್ರಸಂಗ ಉಂಟಾದೀತು. ಅಗತ್ಯಕ್ಕೆ ಬೇಕಷ್ಟು ಹಣ ಸಿಗದೆ ಪರದಾಟ. ಸಾಲ ಮಾಡುವ ಯೋಚನೆ ಬಿಟ್ಟುಬಿಡಿ.
ಧನು
ಕೌಟುಂಬಿಕ ಭಿನ್ನಾಭಿಪ್ರಾಯ ಮನಸ್ಸಿನ ನೆಮ್ಮದಿ ಕದಡಿಸಬಹುದು. ಹಿರಿಯರು ಆರೋಗ್ಯಕ್ಕೆ ಹೆಚ್ಚು ಗಮನ ಕೊಡಬೇಕು.
ಮಕರ
ಇತರರ ವಿಷಯದಲ್ಲಿ ಹಸ್ತಕ್ಷೇಪ ಮಾಡದೆ ಕೆಲಸ ಮಾಡುವುದು ಒಳಿತು. ಇಲ್ಲವಾದರೆ ಎಲ್ಲರ ವಿರೋಧ ಕಟ್ಟಿಕೊಳ್ಳುವಿರಿ. ಕೌಟುಂಬಿಕ ಅಸಂತೋಷ.
ಕುಂಭ
ಉದ್ಯಮದಲ್ಲಿ ಯಶಸ್ಸು. ಧನಲಾಭ. ಅಪೂರ್ಣ ಕಾರ್ಯವು ಉತ್ತಮವಾಗಿ ಕೊನೆಗೊಳ್ಳುವುದು. ಕೌಟುಂಬಿಕ ನಿರೀಕ್ಷೆ ಈಡೇರಿಕೆ.
ಮೀನ
ಕಠಿಣ ದಿನ. ಕೆಲಸದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಸಣ್ಣ ವಿಷಯಕ್ಕೂ ರೇಗಲು ಹೋಗದಿರಿ. ಆಪ್ತರ ಸಂಗದಲ್ಲಿ ನಿರಾಳತೆ.