Sunday, November 23, 2025

ರಾತ್ರಿ ಊಟಕ್ಕೆ ಬಿಸಿ ಬಿಸಿ ಪನೀರ್‌ ಪಲಾವ್‌, ರೆಸಿಪಿ ಇಲ್ಲಿದೆ ನೋಡಿ

ಹೇಗೆ ಮಾಡೋದು??

ಮೊದಲು ಮಿಕ್ಸಿಗೆ ಒಂದೂವರೆ ಕಪ್‌ ಅಕ್ಕಿಗೆ ಬೇಕಾದ ಮಸಾಲೆ ಸಿದ್ಧಪಡಿಸಿಕೊಳ್ಳೋಣ
ಮಿಕ್ಸಿಗೆ ಎರಡು ಈರುಳ್ಳಿ, ಖಾರಕ್ಕೆ ತಕ್ಕಷ್ಟು ಹಸಿಮೆಣಸು, ಒಂದು ದೊಡ್ಡ ಟೊಮ್ಯಾಟೊ, ಚಕ್ಕೆ, ಲವಂಗ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಸೋಂಪು, ಅರಿಶಿಣ ಪುಡಿ ಹಾಕಿ ರುಬ್ಬಿ ಇಟ್ಟುಕೊಳ್ಳಿ

ಇತ್ತ ಕುಕ್ಕರ್‌ಗೆ ಎಣ್ಣೆ, ತುಪ್ಪ, ಪಲಾವ್‌ ಎಲೆ, ಕಸೂರಿ ಮೇಥಿ, ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ
ನಂತರ ಎರಡು ಟೊಮ್ಯಾಟೊ ಹೆಚ್ಚಿ ಹಾಕಿ, ಅರಿಶಿಣ ಹಾಗೂ ಉಪ್ಪು ಹಾಕಿ
ನಂತರ ಇದಕ್ಕೆ ನಿಮ್ಮಿಷ್ಟದ ಎಲ್ಲ ತರಕಾರಿಗಳನ್ನು ಹಾಕಿ ಬಾಡಿಸಿ
ನಂತರ ಮಿಕ್ಸಿಯ ಮಸಾಲೆ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ
ಎಣ್ಣೆ ಬಿಟ್ಟ ನಂತರ ಅಕ್ಕಿ ಹಾಕಿ, ನಂತರ ನೀರು ಹಾಕಿ ಕುದಿಸಿ
ನಂತರ ಎರಡು ವಿಶಲ್‌ ಕೂಗಿಸಿದ್ರೆ ಪಲಾವ್‌ ರೆಡಿ
ಇದಕ್ಕೆ ಗ್ರಿಲ್‌ ಮಾಡಿದ ಪನೀರ್‌ ಅಥವಾ ತುಪ್ಪದಲ್ಲಿ ಉಪ್ಪು, ಖಾರದಪುಡಿಯೊಂದಿಗೆ ಸಾಟೆ ಮಾಡಿದರೆ ಪನೀರ್‌ ಪಲಾವ್‌ ರೆಡಿ

error: Content is protected !!