VIRAL VIDEO | ಸುಡುಬಿಸಿಲು, ಬರೀಗಾಲು, ಕುರ್ಚಿಯೇ ಆಧಾರ… 70ರ ವೃದ್ಧೆ ನಡೆದುಹೋಗಿದ್ದು ಎಲ್ಲಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜ್ಜ ಅಥವಾ ಅಜ್ಜಿ ನಿಮ್ಮೂರಿಗೆ ಬಂದರೆ, ಬಿಸಿಲಿನಲ್ಲಿ ಎರಡು ನಿಮಿಷವೂ ನಿಲ್ಲೋಕೆ ಬಿಡದೇ ಅವರು ಬರುವ ಮುನ್ನವೇ ಬಸ್‌ಸ್ಟಾಪ್‌ನಲ್ಲಿ ಕಾಯುತ್ತಾ ನಿಂತಿರುತ್ತೀರಿ ಅಲ್ವಾ?
ಇಲ್ಲೊಬ್ಬ ಹಣ್ಣು ಹಣ್ಣು ಮುದುಕಿ ಬಿಸಿಲಿನಲ್ಲಿ ಬರೀಗಾಲಿನಲ್ಲಿ ಕುರ್ಚಿಯ ಸಹಾಯ ಪಡೆದು ನಡೆದುಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

70  ವರ್ಷದ ವೃದ್ಧೆ ಸೂರ್ಯ ಹರಿಜನ್ ಒಡಿಶಾದ ನಬ್ರಂಗ್‌ಪುರ್ ಜಿಲ್ಲೆಯಲ್ಲಿ ನಡೆದು ಹೋಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅಜ್ಜಿ ನೋಡಿದರೆ ಕರುಳು ಕಿತ್ತುಬರುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

ವಲಸೆ ಕಾರ್ಮಿಕರಾಗಿದ್ದ ಸೂರ್ಯ ಅವರು ಇಷ್ಟು ವರ್ಷವೂ ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಕಿರಿ ಮಗನ ಜತೆ ವಾಸವಿದ್ದಾರೆ, ಮನೆ, ಜಮೀನು, ಕೆಲಸ ಯಾವುದೂ ಇಲ್ಲದೆ ಗುಡಿಸಿಲಿನಲ್ಲಿ ಬದುಕುತ್ತಿದ್ದಾರೆ.

ಮೂರು ಸಾವಿರ ರೂಪಾಯಿ ಪಿಂಚಣಿಗಾಗಿ ಅಜ್ಜಿ ಅಷ್ಟೆಲ್ಲಾ ಕಷ್ಟಪಟ್ಟರೂ ಬ್ಯಾಂಕ್‌ನಲ್ಲಿ ಹೆಬ್ಬೆಟ್ಟು ಮ್ಯಾಚ್ ಆಗದ ಕಾರಣ ಅಜ್ಜಿಯನ್ನು ಮನೆಗೆ ಕಳುಹಿಸಲಾಗಿದೆ. ಅಜ್ಜಿಯ ಹೆಬ್ಬೆಟ್ಟಿನ ಗುರುತು, ಕೆಲಸಮಾಡಿ ಮಾಡಿ, ಸವೆದು ಹೋಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಸಕೊಡುತ್ತೇವೆ ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.

ಈ ರೀತಿ ಯಾರೇ ವೃದ್ಧರು ಎಲ್ಲಿಯೇ ಕಾಣಿಸಿದರೂ ತುಸು ಹೊತ್ತು ಅವರೊಂದಿಗೆ ಮಾತನಾಡಿ, ಅವರಿಗೇನು ಬೇಕು ಕೈಲಾದ ಸಹಾಯ ಮಾಡಿ…

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!