ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಬೇಸಿಗೆಯ ಬೇಗೆಯಿಂದ ಕಂಗೆಟ್ಟಿದ್ದಾರೆ. ಬಿಸಿಲಿನ ಝಳಕ್ಕೆ ಬೇಸತ್ತು ಎಸಿ ಸೌಲಭ್ಯ ನೀಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಈಗೆಲ್ಲಾ ಏರ್ ಕಂಡೀಷನರ್ ಕಾಮನ್, ಈ ಸೌಲಭ್ಯ ಕೂಡ ಇಲ್ಲವಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಡೆಯುವ ಕ್ರೀಡಾಗ್ರಾಮದಲ್ಲಿ ಎಸಿ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಗ್ರೀನ್ ಒಲಿಂಪಿಕ್ಸ್ ಅಭಿಮಾನದಡಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಲು ಉದ್ದೇಶಿಸಿರುವ ಆಯೋಜಕರು ಎಸಿ ಆಯ್ಕೆಗಳನ್ನು ಕೈ ಬಿಟ್ಟಿದ್ದಾರೆ. ಅಲ್ಲದೆ ಸಾವಿರಾರು ಅಥ್ಲೀಟ್‌ಗಳು ಮತ್ತು ಅಧಿಕಾರಿಗಳು ತಂಗುವ ಸಂಕೀರ್ಣದಲ್ಲಿ ಎಸಿಗಳನ್ನು ಸ್ಥಾಪಿಸಲಾಗಿಲ್ಲ.
ಆದರೀಗ ಪ್ಯಾರಿಸ್ನಲ್ಲಿ ಬಿಸಿಲ ಕಾವು ಏರುತ್ತಿದ್ದು, ಇದರಿಂದ ಕ್ರೀಡಾಪಟುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಎದುರಾಗುತ್ತಿರುವ ಉಷ್ಣ ಹವಾ ಬಗ್ಗೆ ಆಯೋಜಕರ ಗಮನ ಸೆಳೆದಿದ್ದಾರೆ. ಅಲ್ಲದೆ ಅನೇಕ ದೇಶಗಳ ಕ್ರೀಡಾಪಟುಗಳು ಎಸಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಕೆಲ ದೇಶಗಳ ಕ್ರೀಡಾಪಟುಗಳ ಒತ್ತಡಕ್ಕೆ ಮಣಿದಿರುವ ಒಲಿಂಪಿಕ್ಸ್ ಆಯೋಜಕರು ಕೇವಲ 2500 ತಾತ್ಕಾಲಿಕ ಎಸಿಗಳನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ. ಆದರೆ ಇದು ಸಾಕಾಗುವುದಿಲ್ಲ ಎಂಬ ವಾದವನ್ನು ಕ್ರೀಡಾಪಟುಗಳು ಮುಂದಿಡುತ್ತಿದ್ದಾರೆ.