April 11, 2026
Saturday, April 11, 2026
spot_img

ಊಟದ ಜತೆ ಗ್ಯಾಸ್‌ಗೂ ಬಿಲ್‌ ಹಾಕಿದ ಹೊಟೇಲ್‌, ಗ್ರಾಹಕರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೂರದ ದೇಶದ ಯುದ್ಧದಿಂದ ಭಾರತದಲ್ಲಿ ಗ್ಯಾಸ್‌ ಸಿಲಿಂಡರ್‌ ಸಮಸ್ಯೆಯಾಗುತ್ತಿದೆ. ಎಲ್ಲಿಯೂ ಊಟ ಸಿಗದೇ ಜನ ಕಂಗಾಲಾಗಿದ್ದಾರೆ. ಈ ಮಧ್ಯದಲ್ಲೇ ಹೊಟೇಲ್‌ ಒಂದು ತಿಂಡಿ ಜೊತೆ ಗ್ಯಾಸ್‌ ಚಾರ್ಜ್‌ ಹಾಕಿದೆ.

ಹೌದು, ತಿಂಡಿಯ ಜೊತೆ ಮೂವತ್ತು ರೂಪಾಯಿ ಹೆಚ್ಚುವರಿ ಹಣ ಪಾವತಿ ಮಾಡುವಂತೆ ಹೇಳಲಾಗಿದೆ. ಬೆಂಗಳೂರಿನ ಮಿಸ್ಟರ್‌ ಆಂಧ್ರ ಮೀಲ್ಸ್‌ ಎನ್ನುವ ಹೊಟೇಲ್‌ನಲ್ಲಿ ಈ ರೀತಿ ಬಿಲ್‌ ನೀಡಿದ್ದಾರೆ.

ದೋಸೆ, ಚಿಕನ್‌ ಕರ್ರಿ ನಂತರ ಗ್ಯಾಸ್‌ ಚಾರ್ಜ್‌ ಎಂದು ಬಿಲ್‌ನಲ್ಲಿ ನಮೂದಿಸಲಾಗಿದೆ. ಪಿಜಿಗೆ ಊಟಕ್ಕೆ ಸೇರಿ ಬಿಲ್‌ ಕಟ್ಟುತ್ತೀವಿ ಆದರೆ ಊಟ ಸಿಗುತ್ತಿಲ್ಲ. ಅದಕ್ಕಾಗಿಯೇ ಹೊಟೇಲ್‌ಗೆ ಬಂದರೆ ಇಲ್ಲಿ ಊಟಕ್ಕೆ ದುಡ್ಡು ಕೊಡೋದಲ್ಲದೆ ಗ್ಯಾಸ್‌ಗೂ ಹಣ ಕೊಡಬೇಕಿದೆ ಎಂದು ಗ್ರಾಹಕರು ಬೇಸರಿಸಿಕೊಂಡಿದ್ದಾರೆ.ಬಿಲ್‌ನ್ನು ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.‌

ವೈರಲ್‌ ಆಗುತ್ತಿರುವ ಬಿಲ್‌ಗೆ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದು, ಇದೊಂದು ದೊಡ್ಡ ಸ್ಕ್ಯಾಮ್, ಸಾರ್ವಜನಿಕರನ್ನು ಲೂಟಿ ಮಾಡುವ ಕೆಲಸ. ಬಿಲ್‌ನಲ್ಲಿ ಹೊಟೇಲ್‌ ರೆಂಟ್‌, ಕೆಲಸ ಮಾಡುವವರ ಸಂಬಳ, ಗ್ಯಾಸ್‌, ತರಕಾರಿ ಎಲ್ಲವೂ ಸೇರಿಯೇ ತೆಗೆದುಕೊಂಡಿರುತ್ತಾರೆ. ಸಂದರ್ಭದ ಲಾಭ ಪಡೆದುಕೊಂಡು ಈ ರೀತಿ ಜನರನ್ನು ಕೊಳ್ಳೆ ಹೊಡೆಯೋದು ತಪ್ಪು ಎನ್ನುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !