ಹೋಟೆಲ್ ಮಾಲೀಕನ ಭೀಕರ ಹತ್ಯೆ ಹಿಂದಿದೆ ಭಯಾನಕ ಸಂಗತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ನಡೆದಿದ್ದ ಹೋಟೆಲ್​ ಮಾಲೀಕ ಸಿದ್ದಿಖ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ಪೊಲೀಸ್​ ವರಿಷ್ಠಾಧಿಕಾರಿ ಸುಜಿತ್​ ದಾಸ್​ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಆರೋಪಿಗಳಾದ ಶಿಬಿಲಿ ಮತ್ತು ಫರ್ಹಾನ ಎಣೆದಿದ್ದ ಹನಿಟ್ರ್ಯಾಪ್​ ಬಲೆಗೆ ಬಿದ್ದ ಮಾಲೀಕ ಸಿದ್ದಿಖ್​ ಪ್ರಾಣ ಕಳೆದುಕೊಂಡಿದ್ದಾರೆ ಎಂದು‌ ಹೇಳಿದ್ದಾರೆ.

ಭಾರೀ ಹಣ ಸಂಪಾದನೆ ಮಾಡುವ ಬಯಕೆಯಿಂದ ಶಿಬಿಲಿ ಮತ್ತು ಫರ್ಹಾನ ಅಡ್ಡದಾರಿ ಹಿಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್​ಪಿ ಸುಜಿತ್​ ತಿಳಿಸಿದರು. ಫರ್ಹಾನ, ಸಿದ್ದಿಖ್​ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಶಿಬಿಲಿಗೆ ರೆಸ್ಟೋರೆಂಟ್​ನಲ್ಲಿ ಕೆಲಸ ಕೊಡುವಂತೆ ಸಿದ್ದಿಖ್​ನನ್ನು ಪ್ರೇರೆಪಿಸಿದ್ದಳು. ಬಳಿಕ ಶಿಬಿಲಿ ಹನಿಟ್ರ್ಯಾಪ್​ ಯೋಜನೆ ರೂಪಿಸಿ, ಸಿದ್ದಿಖ್​ನನ್ನು ಹೋಟೆಲ್​ಗೆ ಕರೆಸಿಕೊಂಡನು. ಬಳಿಕ ಬೆತ್ತಲೆಯಾಗುವಂತೆ ಫರ್ಹಾನ, ಸಿದ್ದಿಖ್​ನನ್ನು ಕೇಳಿದಳು. ಆತನನ್ನು ಬೆತ್ತಲೆ ಮಾಡಿ ಫೋಟೋಶೂಟ್​ ಮಾಡಿ ಬೆದರಿಕೆ ಹಾಕುವುದು ಅವರ ದುರುದ್ದೇಶವಾಗಿತ್ತು. ಆದರೆ ಸಿದ್ದಿಖ್​ ನಿರಾಕರಿಸಿದನು. ಇದಾದ ನಂತರ ಶಿಬಿಲಿ, ಸಿದ್ದಿಖ್​ ತಲೆ ಮತ್ತು ಎದೆಯ ಮೇಲೆ ಸುತ್ತಿಗೆಯಿಂದ ಹೊಡೆದನು. ಈ ವೇಳೆ ಶಿಬಿಲಿಗೆ ಸುತ್ತಿಗೆ ನೀಡಿದ್ದೇ ಫರ್ಹಾನ. ಇವರಿಬ್ಬರ ಕಾಮನ್ ಫ್ರೆಂಡ್ ಆಶಿಕ್, ಸಿದ್ದಿಕ್ ಎದೆಯನ್ನು ತುಳಿದು ಸಾವನ್ನು ಖಚಿತಪಡಿಸಿಕೊಂಡಿದ್ದಾರೆ.

ಬಳಿಕ ಮೂವರು ದೇಹದ ಭಾಗಗಳನ್ನು ತುಂಡರಿಸಿ, ಟ್ರಾಲಿಯಲ್ಲಿ ಪ್ಯಾಕ್ ಮಾಡಲು ಯೋಜಿಸಿದ್ದರು. ನಂತರ ಒಂದು ಕಟ್ಟರ್ ಮತ್ತು ಟ್ರಾಲಿಯನ್ನು ಖರೀದಿಸಿದರು. ದೇಹವನ್ನು ಹಲವಾರು ಭಾಗಗಳಾಗಿ ಕತ್ತರಿಸಲಾಯಿತು. ಆಶಿಕ್, ಅಟ್ಟಪಾಡಿಯ ಯಾವುದೋ ನಿರ್ಜನ ಪ್ರದೇಶದಲ್ಲಿ ಟ್ರಾಲಿಯನ್ನು ಹಾಕಲು ಐಡಿಯಾ ಮಾಡಿದ್ದಾನೆ. ನಂತರ ಮೂವರು ಚೆನ್ನೈ ಮೂಲಕ ಅಸ್ಸಾಂಗೆ ಪಲಾಯನ ಮಾಡಲು ಪ್ರಯತ್ನಿಸಿದರು. ಆದರೆ ಪ್ರಯತ್ನ ಫಲಿಸದೇ ಮೂವರು ಈಗ ಪೊಲೀಸರ ಬಲೆಗೆ ಸಿಕ್ಕಿಬಿಕ್ಕಿದ್ದಾರೆ.

ಸಿದ್ದಿಕ್‌ನ ಎಟಿಎಂ ಕಾರ್ಡ್‌ನ ಪಿನ್ ನಂಬರ್​ ಅನ್ನು ಫರ್ಹಾನ ಪಡೆದುಕೊಂಡಿದ್ದಳು. ಸಾವಿನ ನಂತರ ಆತನ ಖಾತೆಯಿಂದ 2 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಹಣ ಪಡೆದ ಸಂದೇಶ ನೇರವಾಗಿ ಸಿದ್ದಿಕ್ ಅವರ ಮಗನ ಮೊಬೈಲ್ ಫೋನ್‌ಗೆ ಹೋಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ತಂದೆಗಾಗಿ ಹುಡುಕಾಡಿ, ಸಿಗದಿದ್ದಾಗ ನಾಪತ್ತೆ ದೂರು ದಾಖಲಿಸಿದ್ದರು.

ಕೊನೆಗೆ ಶವವಾಗಿ ಸಿದ್ದಿಖ್​ ಪತ್ತೆಯಾಗಿದ್ದು, ಮೂವರು ಆರೋಪಿಗಳು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!