ಹೊಸ ದಿಗಂತ ವರದಿ,ಮುಂಡಗೋಡ:
ಮನೆಯ ಬಾಗಿಲಿನ ಬೀಗ ಮುರಿದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಕಳ್ಳನನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಂಜುನಾಥ ನಾಯಕ ಬಂಧಿತ ಆರೋಪಿ.
ಜನವರಿ 27 ರಂದು ಪಟ್ಟಣದ ಅಂಬೇಡ್ಕರ್ ಓಣಿಯ ಬಸವರಾಜ ಚಲವಾದಿ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು.
ಮಾರಿಕಾಂಬಾ ಜಾತ್ರೆ ನಿಮಿತ್ತ ಪಟ್ಟಣ ವ್ಯಾಪ್ತಿಯ ಜನರು ಹೊರಬೀಡು ಆಚರಣೆ ಮಾಡುತ್ತಿದ್ದರು. ಮಂಗಳವಾರ 5 ನೇ ಹೊರಬೀಡು ನಿಮಿತ್ತ ಮನೆಯವರು ಮನೆಗೆ ಬೀಗ ಹಾಕಿ ಹೋಗಿದ್ದರು.ಈ ವೇಳೆ ಮನೆಯ ಮುಂಭಾಗದ ಬೀಗವನ್ನು ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಟ್ರಜರಿ ಮುರಿದು ಸುಮಾರು ಎರಡು ಲಕ್ಷ ನಾಲ್ವತ್ತು ನಾಲ್ಕು ಸಾವಿರ 2,44,000. ರೂಪಾಯಿ ಮೌಲ್ಯದ 14ಗ್ರಾಂ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ ವರಿಷ್ಠಧಿಕಾರಿ ದೀಪನ್ ಎಮ್ ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಜಗದೀಶ ಎಮ್ ಡಿವೈಎಸ್ಪಿ ಗೀತಾ ಪಾಟಿಲ್ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ವಿಶೇಷ ರಚಿಸಿದ್ದರು.
ಶನಿವಾರ ಬೆಳಿಗ್ಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿ ಆರೋಪಿಯಿಂದ 14 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಸಿಪಿಐ ರಂಗನಾಥ ನೀಲಮ್ಮನವರ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ ಚಿಂಚಲಿ,ಕೋಟೇಶ್ವರ ನಾಗರವಳ್ಳಿ,ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಮಾಣಿ, ಕಲ್ಲಪ್ಪ ಹೊನ್ನಿಹಳ್ಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಾಲೂಕು ಪೋಲಿಸರ ಯಶಸ್ವಿ ಕಾರ್ಯಚರಣೆಗೆ ಜಿಲ್ಲಾ ಎಸ್ಪಿ ಎಮ್ ಎನ್ ದೀಪನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



