ಹೊಸದಿಗಂತ ಹಾಸನ :
ವಾಸದ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಧಗಧಗಿಸಿ ಹೊತ್ತಿ ಉರಿದಿರುವ ಘಟನೆ ಹಾಸನ ತಾಲ್ಲೂಕಿನ, ದೇವಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೇವಿಹಳ್ಳಿ ಗ್ರಾಮದ ರೈತ ದಿನೇಶ್ ಎಂಬುವವರಿಗೆ ಸೇರಿದ ಮನೆ ಸರ್ಕ್ಯೂಟ್‌ನಿಂದ ಬೆಂಕಿಗಾಹುತಿಯಾಗಿದೆ. ಹೊತ್ತಿ ಉರಿದ ಬೆಂಕಿಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಹಾನಿಯಾಗಿ, ರೈತ ಕುಟುಂಬ ಲಕ್ಷಾಂತರ ರೂ ನಷ್ಟ ಅನುಭವಿಸಿದೆ.
ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಶಾರ್ಟ್ ಸರ್ಕ್ಯೂಟ್ ಆಗಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದಿನೇಶ್ ಹಾಗೂ ಪತ್ನಿ ಜಮೀನು ಕೆಲಸಕ್ಕೆ ತೆರಳಿದ್ದಾರೆ. ಬೆಂಕಿ ನಂದಿಸಲು ಅಕ್ಕಪಕ್ಕದ ನಿವಾಸಿಗಳು ಯತ್ನಿಸಿದರು ಬಿಸಿಲಿನ ತಾಪ ಹೆಚ್ಚಿದ್ದರಿಂದ ಇಡೀ ಮನೆಗೆ ಇನ್ನು ಬೆಂಕಿ ವ್ಯಾಪಿಸಿದೆ.
ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಭರ್ತಿಯಾಗಿದ್ದ ಸಿಲಿಂಡರ್ ಹೊರಗೆ ತಂದು ಮುನ್ನೆಚ್ಚರಿಕೆ ಕ್ರಮದಿಂದ ಬಾರಿ ಅನಾಹುತ ತಪ್ಪಿದೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.