FOOD | ಚಳಿ ಚಳಿ ವೆದರ್‌ಗೆ ಬಿಸಿ ಬಿಸಿ ಸ್ಪೈಸಿ ಪುದೀನ ಚಿಕನ್‌ ತಿಂದ್ರೆ ಹೇಗಿರತ್ತೆ??

ಸಾಮಾಗ್ರಿಗಳು

ಚಿಕನ್- ಅರ್ಧ ಕೆಜಿ

ಪುದೀನ- 1 ಬಟ್ಟಲು

ಈರುಳ್ಳಿ- 1

ಅರಿಶಿನ ಪುಡಿ- ಸ್ವಲ್ಪ

ಗರಂ ಮಸಾಲ ಪುಡಿ- ಅರ್ಧ ಚಮಚ

ಕಾಳು ಮೆಣಸಿನ ಪುಡಿ- ಕಾಲು ಚಮಚ

ಕರಿಬೇವು- ಸ್ವಲ್ಪ

ಚಕ್ರಮೊಗ್ಗು- 1

ದಾಲ್ಚಿನ್ನಿ ಅಥವಾ ಚಕ್ಕೆ – ಸ್ವಲ್ಪ

ಲವಂಗ – 5

ಏಲಕ್ಕಿ- 2

ಶುಂಠಿ- ಸ್ವಲ್ಪ

ಬೆಳ್ಳುಳ್ಳಿ- ಸ್ವಲ್ಪ

ಹಸಿ ಮೆಣಸಿನಕಾಯಿ- 5

ಕೊತ್ತಂಬರಿ ಸೊಪ್ಪು- ಸ್ವಲ್ಪ

ಅಡುಗೆ ಎಣ್ಣೆ – ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ 

ಒಂದು ಮಿಕ್ಸಿ ಜಾರ್‌’ಗೆ ಪುದೀನ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಶುಂಠಿ ಹಾಗೂ ಬೆಳ್ಳುಳ್ಳಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಟ್ಟುಕೊಲ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಚಕ್ಕೆ, ಲವಂಗ, ಕಾಳು ಮೆಣಸು, ಪಲಾವ್ ಎಲೆ, ಚಕ್ಕೆ, ಚಕ್ರಮೊಗ್ಗು, ಹಾಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.

ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿದ ಬಳಿಕ ಚೆನ್ನಾಗಿ ತೊಳದಿಟ್ಟುಕೊಂಡ ಚಿಕನ್ ಫೀಸ್‌ಗಳನ್ನು ಹಾಕಿ. ಬಳಿಕ ಅರಶಿಣ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ 5 ನಿಮಿಷ ಫ್ರೈ ಮಾಡಿಕೊಳ್ಳಬೇಕು. 5 ರಿಂದ 6 ನಿಮಿಷದ ಬಳಿಕ ಇದಕ್ಕೆ ಮಿಕ್ಸಿ ಜಾರ್‌ನಲ್ಲಿ ರುಬ್ಬಿದ್ದ ಮಸಾಲೆಯನ್ನು ಹಾಕಿ.

ಬಳಿಕ ಸ್ವಲ್ಪ ನೀರು ಸಹ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಇದಕ್ಕೆ ಕಾಳು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿ. ಮುಚ್ಚಳ ಮುಚ್ಚಿ 10 ನಿಮಿಷ ಬೇಯಲು ಬಿಡಿ. ಆಗಾಗ ತಳ ಹಿಡಿಯದಂತೆ ಕೈಯಾಡಿಸುತ್ತಿರಿ. ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ತಿನ್ನಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!