ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸಿನಿಮಾಗಳಲ್ಲಿ ಮೊದಲು ದಕ್ಷಿಣದ ನಟರನ್ನು ಕ್ಷುಲ್ಲಕವಾಗಿ ಕಾಣುತ್ತಿದ್ದರು. ಆದ್ರೆ ಇಂದು ದಕ್ಷಿಣ ಭಾರತದ ನಟ-ನಟಿಯರು ದಶಕಗಳಿಂದಲೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಕನಿಷ್ಟ ಗೌರವ ಲಭ್ಯವಾಗುತ್ತಿವೆ.
ದಕ್ಷಿಣದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಸಹ ಇದೇ ರೀತಿಯ ಪಾತ್ರಗಳಿಗಾಗಿ ಈ ಹಿಂದೆ ಬಾಲಿವುಡ್ಗೆ ಹೋಗಿದ್ದರು. ಆದರೆ ಅಲ್ಲಿ ಅವರಿಗೆ ಆದ ಅವಮಾನದ ಬಗ್ಗೆ ಇದೀಗ ಸ್ವತಃ ದುಲ್ಕರ್ ಸಲ್ಮಾನ್ ಮಾತನಾಡಿದ್ದಾರೆ.
ದುಲ್ಕರ್ ಸಲ್ಮಾನ್ ಅವರು ಇತ್ತೀಚೆಗಷ್ಟೆ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ನ ಚಾನೆಲ್ಲಿನ ರೌಂಡ್ಟೇಬಲ್ ಸಂದರ್ಶನದಲ್ಲಿ ಮಾತನಾಡಿದ್ದು, ಬಾಲಿವುಡ್ ತಮಗೆ ಮಾಡಿದ ಅವಮಾನ, ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಮಾತನಾಡಿದ್ದಾರೆ.
ದುಲ್ಕರ್ ಸಲ್ಮಾನ್ ಹೇಳಿರುವಂತೆ ‘ಬಾಲಿವುಡ್ನಲ್ಲಿ ತಾವು ಸೂಪರ್ ಸ್ಟಾರ್ ಎಂದು ತೋರಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ನಿಮ್ಮನ್ನು ಯಾರೂ ಕೇರ್ ಸಹ ಮಾಡುವುದಿಲ್ಲ’ ಎಂದಿದ್ದಾರೆ.
ಮಾತ್ರವಲ್ಲದೇ ತಮ್ಮದೇ ಉದಾಹರಣೆಯನ್ನು ನೀಡಿದ್ದಾರೆ. ‘ನೀವು ಸರಳವಾಗಿ ನಡೆದುಕೊಂಡರೆ ನಿಮಗೆ ಗೌರವ ಸಿಗುವುದಿಲ್ಲ. ನೀವು ಇಬ್ಬರು ಸಹಾಯಕರೊಟ್ಟಿಗೆ ಬಂದರೆ ನಿಮ್ಮನ್ನು ಸೆಟ್ನಲ್ಲಿ ಮೂಲೆಗುಂಪು ಮಾಡಲಾಗುತ್ತದೆ. ಕೂರಲೂ ಕುರ್ಚಿ ಸಹ ನೀಡುವುದಿಲ್ಲ. ನನಗೆ ಒಂದು ಸಿನಿಮಾದ ಶೂಟಿಂಗ್ ಮಾಡುವಾಗ ಮಾನಿಟರ್ ಹಿಂದೆ ಜಾಗವೇ ಕೊಡುತ್ತಿರಲಿಲ್ಲ. ಅದೇ ನೀವು ಹತ್ತಾರು ಸಹಾಯಕರನ್ನು ಕರೆದುಕೊಂಡು, ಭಾರಿ ದೊಡ್ಡ ಗಾಡಿಯಲ್ಲಿ ಸೆಟ್ಗೆ ಬಂದಿರೆದಂರೆ ನಿಮ್ಮನ್ನು ಹೀರೋ ರೀತಿ ನಡೆಸಿಕೊಳ್ಳಲಾಗುತ್ತದೆ. ಬಾಲಿವುಡ್ನಲ್ಲಿ ಸರಳವಾಗಿದ್ದರೆ ಗೌರವ ಸಿಗುವುದಿಲ್ಲ. ಬಲವಂತವಾಗಿ ಸ್ಟಾರ್ ಗಿರಿ ತೋರಿಸಬೇಕಾಗುತ್ತದೆ’ ಎಂದಿದ್ದಾರೆ ದುಲ್ಕರ್ ಸಲ್ಮಾನ್.
ದುಲ್ಕರ್ ಸಲ್ಮಾನ್ ಹೇಳಿದ್ದಕ್ಕೆ ಇನ್ನೊಬ್ಬರು ಸಾಕ್ಷಿ ಸಹ ಇದ್ದಾರೆ. ರಾಣಾ ದಗ್ಗುಬಾಟಿ ಅವರು ದುಲ್ಕರ್ ಸಲ್ಮಾನ್, ಬಾಲಿವುಡ್ ಸಿನಿಮಾನಲ್ಲಿ ನಟಿಸುವಾಗ ಎಷ್ಟು ಅವಮಾನ ಎದುರಿಸಿದ್ದರು ಎಂಬುದನ್ನು ಕಣ್ಣಾರೆ ನೋಡಿದ್ದಾಗಿ ಹೇಳಿದ್ದ ರಾಣಾ ದಗ್ಗುಬಾಟಿ ಅದನ್ನು ಹಿಂದೊಮ್ಮೆ ವಿವರಿಸಿದ್ದರು ಸಹ ಅದು ವಿವಾದವೂ ಆಗಿತ್ತು.
ದುಲ್ಕರ್ ಸಲ್ಮಾನ್ ಈ ವರೆಗೆ ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇರ್ಫಾನ್ ಖಾನ್ ಜೊತೆಗೆ ‘ಕ್ಯಾರವ್ಯಾನ್’, ಸೋನಂ ಕಪೂರ್ ನಾಯಕಿಯಾಗಿದ್ದ ‘ದಿ ಜೋಯಾ ಫ್ಯಾಕ್ಟರ್’ ಮತ್ತು ಥ್ರಿಲ್ಲರ್ ಕತೆಯುಳ್ಳ ‘ಚುಪ್’. ಈ ಮೂರು ಬಾಲಿವುಡ್ ಸಿನಿಮಾಗಳಲ್ಲಿ ದುಲ್ಕರ್ ನಟಿಸಿದ್ದಾರೆ. ಮಲಯಾಳಂ ಚಿತ್ರರಂಗದವರಾದರೂ ಸಹ ತಮಿಳು, ತೆಲುಗು ಚಿತ್ರರಂಗಗಳಲ್ಲಿಯೂ ದೊಡ್ಡ ಹಿಟ್ ಸಿನಿಮಾಗಳನ್ನು ದುಲ್ಕರ್ ನೀಡಿದ್ದಾರೆ.

