ಹೊಸದಿಗಂತ ಡಿಇಟಲ್ ಡೆಸ್ಕ್:
ನಾನು ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದೇನೆ. ಅದು ಆಫೀಸ್ ಕಚೇರಿ ಅವಧಿ ತರವೇ ಇರುತ್ತದೆ, ಬಟ್ ಬಾಲಿವುಡ್‌ನಲ್ಲಿ ಹಾಗಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಸೌತ್‌ನಲ್ಲಿ ಬೆಳಗ್ಗೆ ಒಂಬತ್ತರಿಂದ ಸಂಜೆ ಆರು ಗಂಟೆವರೆಗೆ ಚಿತ್ರೀಕರಣೆ ಮಾಡಿದರೆ ಆಯಿತು. ಶೂಟ್ ಬಳಿಕ ಕುಟುಂಬದ ಜೊತೆ ಸಮಯ ಕಳೆಯಬಹುದು, ನಿದ್ದೆ ಮಾಡಬಹುದು. ಆದರೆ, ಹಿಂದಿಯಲ್ಲಿ ಹಾಗಲ್ಲ. ಅಲ್ಲಿ 12 ಗಂಟೆ ಶಿಫ್ಟ್. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡಬೇಕು. ನನಗೆ ಎರಡೂ ಇಷ್ಟ. ಸಿನಿಮಾ ಯಾವುದನ್ನು ಕೇಳುತ್ತದೆಯೋ ಅದನ್ನು ಮಾಡುತ್ತೇನೆ ಎಂದಿದ್ದಾರೆ.
ಈ ಕೆಲಸದ ಅವಧಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಅವರವರಿಗೆ ಬಿಟ್ಟ ವಿಚಾರ. ಪ್ರತಿ ಸಿನಿಮಾ ಆರಂಭಕ್ಕೂ ಮೊದಲು ಕಲಾವಿದರು ಈ ಬಗ್ಗೆ ತಂಡದ ಜೊತೆ ಮಾತನಾಡಬೇಕು. ಎಷ್ಟು ಗಂಟೆ ಶೂಟ್ ಇರುತ್ತದೆ, ಯಾವ ಸಂದರ್ಭದಲ್ಲಿ ಶೂಟ್ ಮಾಡಲಾಗುತ್ತದೆ ಎಂಬುದನ್ನು ಚರ್ಚಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕೆಲವೊಮ್ಮೆ ಬೆಳಿಗ್ಗೆ 9ಕ್ಕೆ ಶೂಟ್ ಶುರುವಾಗಿ 9ಕ್ಕೆ ಮುಗಿಯಬೇಕಿರುತ್ತದೆ. ಆದರೆ, ಮುಂದಿನ ದಿನದವರೆಗೂ ಅದು ಸಾಗುತ್ತದೆ. ಈ ಮೂಲಕ ಅದು 36 ಗಂಟೆ, 48 ಗಂಟೆ ನಿದ್ದೆ ಇಲ್ಲದೆ ಕೆಲಸ ಮಾಡಿದಂತಾಗುತ್ತದೆ. ಸಿನಿಮಾ ಶೂಟ್ನಲ್ಲಿ ಈ ರೀತಿ ಆಗೋದು ಕಾಮನ್ ಎಂದಿದ್ದಾರೆ ರಶ್ಮಿಕಾ.