ಗೋಲ್ಡನ್ ಟೆಂಪಲ್ ಗುರಿಯಾಗಿಸಿ ಪಾಕ್ ನಡೆಸಿದ ಕ್ಷಿಪಣಿಯನ್ನು ಭಾರತ ಹೊಡೆದುರುಳಿಸಿದ್ದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವು ಆಪರೇಷನ್ ಸಿಂದೂರ್​ ಅಡಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸುತ್ತಿದ್ದರೆ ಇತ್ತ ಪಂಜಾಬ್​ನ ಅಮೃತಸರದಲ್ಲಿರುವ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಕ್ಷಿಪಣಿಗಳು ಮತ್ತು ಡ್ರೋನ್​ ಮೂಲಕ ದಾಳಿ ಮಾಡಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ..

ಈ ಕುರಿತು ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಈ ಮಾಹಿತಿ ನೀಡಿದ್ದು, ಪಂಜಾಬ್‌ನ ಅಮೃತಸರ ಗುರಿಯಾಗಿಸಿಕೊಂಡು ಪಾಕ್ ನಡೆಸಿದ್ದ ಅಪ್ರಚೋದಿತ ದಾಳಿ ವೇಳೆ ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿ ಹಾಗೂ ಎಲ್-70 ಏರ್ ಡಿಫೆನ್ಸ್ ಗನ್‌ಗಳು ಗೋಲ್ಡನ್ ಟೆಂಪಲ್‌ನ್ನು ರಕ್ಷಿಸಿದವು ಎಂದು ಹೇಳಿದ್ದಾರೆ.

ಪಾಕಿಸ್ತಾನವು ಸ್ವರ್ಣ ಮಂದಿರದಂತಹ ಧಾರ್ಮಿಕ ಸ್ಥಳಗಳು ಸೇರಿದಂತೆ, ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಬಹುದು ಎಂದು ಸೇನೆ ಆಗಲೇ ನಿರೀಕ್ಷಿಸಿತ್ತು, ಅದಕ್ಕೆ ಬೇಕಾದ ಕ್ರಮಗಳನ್ನು ಕೂಡ ತೆಗೆದುಕೊಂಡಿತ್ತು. ಅದೇ ರೀತಿ ಪಂಜಾಬ್‌ನ ಅಮೃತಸರ ಗುರಿಯಾಗಿಸಿಕೊಂಡು ಅಪ್ರಚೋದಿತ ದಾಳಿಯನ್ನು ಭಾರತದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯು ಈ ದಾಳಿಯನ್ನು ವಿಫಲಗೊಳಿಸಿ, ಸಿಖ್ ಧರ್ಮದ ಪವಿತ್ರ ತಾಣವಾದ ಸ್ವರ್ಣ ದೇವಾಲಯವನ್ನು ರಕ್ಷಣೆ ಮಾಡಿತು ಎಂದರು.

ರೆ ಭಾರತ ಆಕಾಶ್ ಕ್ಷಿಪಣಿ ವ್ಯವಸ್ಥೆ, ಎಲ್-70 ಏರ್ ಡಿಫೆನ್ಸ್ ಗನ್‌ಗಳನ್ನು ಸೇರಿದಂತೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಸಿ ಅಮೃತಸರದ ಸ್ವರ್ಣ ದೇವಾಲಯ ಮತ್ತು ಪಂಜಾಬ್‌ನ ನಗರಗಳನ್ನು ಪಾಕ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ರಕ್ಷಿಸಿದ್ದೇವೆ ಎಂದು ವಿವರಿಸಿದರು. ನಮ್ಮ ರಕ್ಷಣಾ ವ್ಯವಸ್ಥೆ ಯಾವುದೇ ರೀತಿಯ ದಾಳಿ ಎದುರಿಸಲು ಸಿದ್ಧವಿದೆ. ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!