ಕೆಲವೊಮ್ಮೆ ನಾವು ತಿಂದಿದ್ದೆಲ್ಲಾ ಜೀರ್ಣವಾಗಿದೆ ಎಂದುಕೊಂಡಿರುತ್ತೇವೆ. ಆದರೆ ಆಗಿರುವುದಿಲ್ಲ. ನಮ್ಮ ದೇಹ ತಿಂದ ಆಹಾರ ಜೀರ್ಣವಾಗಿಲ್ಲ ಎಂದು ಹೇಳೋದಕ್ಕೆ ನಾನಾ ಸಿಗ್ನಲ್‌ಗಳನ್ನು ನೀಡುತ್ತದೆ. ಆದರೆ ನಾವು ಅದನ್ನು ಗಮನಿಸೋದಿಲ್ಲ. ಯಾವ ರೀತಿ ಸಿಗ್ನಲ್ ನೋಡಿ..
- ಹೊಟ್ಟೆಯಲ್ಲಿ ಸಮಾಧಾನ ಇಲ್ಲ, ಗ್ಯಾಸ್, ಮಲಬದ್ಧತೆ, ಬೇಧಿ, ಎದೆ ಉರಿ
- ಮಾಮೂಲಿ ದಿನಕ್ಕಿಂತ ಹೆಚ್ಚು ಸುಸ್ತು ಎನಿಸುವುದು
- ನಿದ್ದೆ ಬಾರದಿರುವುದು, ಅಥವಾ ಕಡಿಮೆ ಸಮಯ ನಿದ್ದೆ ಮಾಡುವುದು
- ಕೆಲವೊಂದು ಆಹಾರ ತಿಂದಾಗ ಅಲರ್ಜಿ ಆಗುವುದು ಉತ್ತಮ ಜೀರ್ಣಕ್ರಿಯೆ ಲಕ್ಷಣವಲ್ಲ
- ಯಾವಾಗಲೂ ತಿನ್ನಬೇಕು ಎನಿಸುತ್ತಲೇ ಇರೋದು, ಅದರಲ್ಲಿಯೂ ಸಿಹಿ ಪದಾರ್ಥ ತಿನ್ನಬೇಕು ಎನಿಸುವುದು
- ಇದ್ದಕ್ಕಿದ್ದಂತೆಯೇ ತೂಕ ಇಳಿಕೆ ಅಥವಾ ಏರಿಕೆ
- ನಾಲಗೆಯ ಮೇಲೆ ಬಿಳಿಯಾದ ಪದರ ಕಾಣುವುದು
- ಚರ್ಮ ಸಂಬಂಧಿತ ಸಮಸ್ಯೆಗಳು ಬಾಧಿಸುವುದು
- ಯಾವಾಗಲೂ ಮೈಗ್ರೇನ್
- ರಾಯಿಡ್, ಡಯಾಬಿಟಿಸ್ ಸಮಸ್ಯೆಗೂ ಇದೇ ಮೊದಲ ಕಾರಣ
- ಆಗಾಗ, ಪದೇ ಪದೆ ನಿಮ್ಮ ಮೂಡ್‌ನಲ್ಲಿ ಬದಲಾವಣೆ, ಒತ್ತಡ, ಖಿನ್ನತೆ