ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಟಾಕ್ಸಿಕ್’ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಮಲಯಾಳಂನ ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಸೆಟ್ಗಳನ್ನು ಹಾಕಿ ಸಿನಿಮಾ ಶೂಟಿಂಗ್ ಮಾಡಲಾಗುತ್ತಿದೆ. ಆದರೆ, ಈಗ ಚಿತ್ರದ ದೃಶ್ಯ ಒಂದು ಲೀಕ್ ಆಗಿರೋದು ತಂಡದ ತಲೆಬಿಸಿ ಹೆಚ್ಚಿಸಿದೆ. ಇದರಿಂದ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ.
ಯಶ್ ಅವರು ಯಾವುದೋ ಪ್ರಮುಖ ವ್ಯಕ್ತಿಯನ್ನು ಮೀಟ್ ಮಾಡುತ್ತಿರುವ ದೃಶ್ಯ ಇದಾಗಿದೆ. ಇಲ್ಲಿ ಸಿನಿಮಾದ ಅದ್ದೂರಿ ಸೆಟ್ ಗಮನ ಸೆಳೆದಿದೆ. ಯಶ್ ಅವರ ಗೆಟಪ್ ಕೂಡ ಗಮನ ಸೆಳೆದಿದೆ. ಈ ದೃಶ್ಯವನ್ನು ಸೆರೆ ಹಿಡಿದಿದ್ದು ಸೆಟ್ನಲ್ಲಿ ಇದ್ದವರಲ್ಲೇ ಒಬ್ಬರು. ಹೀಗಾಗಿ, ಇದು ಚಿತ್ರತಂಡಕ್ಕೆ ತಲೆಬಿಸಿ ತಂದಿದೆ.
ಈಗಾಗಲೇ ಹಲವು ಸಿನಿಮಾ ಸೆಟ್ಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಸಿನಿಮಾದ ಸೆಟ್ ಹಾಗೂ ದೃಶ್ಯಗಳು ಲೀಕ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿಯ ಕಠಿಣ ನಿಯಮ ತಂದ ಉದಾಹರಣೆ ಇದೆ. ‘ಟಾಕ್ಸಿಕ್’ ದೃಶ್ಯಗಳು ಇದೇ ರೀತಿ ಲೀಕ್ ಆಗುತ್ತಾ ಹೋದರೆ ಮುಂದೆ ತಂಡದವರು ಕೂಡ ಇದೇ ನಿಯಮವನ್ನು ತರಬೇಕಾಗುತ್ತದೆ.
Expect the unexpected #YashBOSS in this look >>>> #ToxicTheMovie
Let him cook !!! pic.twitter.com/yGhYro8BZY
— Manya Surve 🥀ᵀᵒˣᶦᶜ (@Rockybhaistat) December 29, 2024