ಲೋಕಸಭಾ ಚುನಾವಣೆಯ 7 ಹಂತಗಳು ಮುಕ್ತಾಯಗೊಂಡಿದ್ದು, ಇಂದು ಮತ ಎಣಿಕೆ ಕಾರ್ಯ ಶುರುವಾಗಿದ್ದು, ಫಲಿತಾಂಶ ಹೊರಬೀಳಲಿದೆ, ಯಾದಗಿರಿ, ಧಾರವಾಡ, ರಾಯಚೂರು, ಹಾವೇರಿಯಲ್ಲಿ ಈವರೆಗಿನ ಕೌಂಟಿಂಗ್ ವಿವರ ಹೀಗಿದೆ..
ಧಾರವಾಡ: ನಿರೀಕ್ಷೆಯಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕ್ಷೇತ್ರದಲ್ಲೇ ಬರೋಬ್ಬರಿ 25 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.
ನವಲಗುಂದ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಅಲ್ಪ ಹಿನ್ನಡೆಯಲ್ಲಿರುವ ಜೋಶಿ, ಒಟ್ಟಾರೆ 85 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯ ಮೂಲಕ ಗೆಲುವಿನತ್ತ ಹೆಜ್ಜೆ ಇರಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ 3,95,298 ಮತ ಪಡೆದಿದ್ದು, 4,82,128 ಮತ ಪಡೆದ ಬಿಜೆಪಿ ಪ್ರಹ್ಲಾದ್ ಜೋಶಿ 86,830 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ..
ರಾಯಚೂರು : ಕಾಂಗ್ರೆಸ್ ಸತತ ಮುನ್ನಡೆ ಸಾಧಿಸುತ್ತಲೇ ಸಾಗುತ್ತಿದೆ.
ಬಿಜೆಪಿಯ ಅಮರೇಶ್ವರ 195193ಪಡೆದರೆ ಕಾಂಗ್ರೆಸ್ಸಿನ ಜಿ.ಕುಮಾರ ನಾಯಕ 227332ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ಸಿನ ಜಿ.ಕುಮಾರ ನಾಯಕ 22139 ಮುನ್ನಡೆ ಸಾಧಿಸಿದ್ದಾರೆ.
ಹಾವೇರಿ: ಬಸವರಾಜ ಬೊಮ್ಮಾಯಿ (ಬಿಜೆಪಿ): 3,20,198
ಆನಂದಸ್ವಾಮಿ ಗಡ್ಡದೇವರಮಠ
(ಕಾಂಗ್ರೆಸ್): 2,97,880 ಬಿಜೆಪಿ ಅಭ್ಯರ್ಥಿಗೆ 22,318 ಮತಗಳ ಮುನ್ನಡೆ.
ಯಾದಗಿರಿ: 13 ನೇ ಸುತ್ತಿನಲ್ಲಿ ಸತತ ಮುನ್ನಡೆ ಪಡೆದುಕೊಂಡು ಸಾಗುತ್ತಿರುವ ಕಾಂಗ್ರೇಸ್ ..
ಸುರಪುರ ವಿಧಾನಸಭೆ ಉಪಚುನಾವಣೆಯಲ್ಲಿ ಹತ್ತನೇ ಸುತ್ತು ಮುಕ್ತಾಯ .
ಕಾಂಗ್ರೆಸ್ ಅಭ್ಯರ್ಥಿ 15946 ಮತಗಳ ಮುನ್ನಡೇ
16651 ಮತಗಳ ಮುನ್ನಡೆ ಸಾಧಿಸಿದ ಕೈ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ
ಬಿಜೆಪಿ: 53669
ಕಾಂಗ್ರೆಸ್ :-70320
ಬಿಜೆಪಿ ಅಭ್ಯರ್ಥಿ ರಾಜುಗೌಡ 16651 ಮತಗಳ ಅಂತರದಿಂದ ಹಿನ್ನಡೆ.
ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಭರ್ಜರಿ ಮುನ್ನಡೆ.