ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವಿತ್ರಾ ಗೌಡ ಲೋ ಬಿಪಿಯಿಂದಾಗಿ ಇಂದು ಕುಸಿದು ಬಿದ್ದಿರುವುದಾಗಿ ವೈದ್ಯೆ ಸವಿತಾ ಹೇಳಿದ್ದಾರೆ.
ಪವಿತ್ರಾ ಗೌಡಗೆ ಚಿಕಿತ್ಸೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ರೆಗ್ಯುಲರ್ ಚೆಕಪ್ ಮಾಡಲಾಗುತ್ತದೆ. ನಾನೇ ಠಾಣೆಗೆ ಹೋಗಿ ಎಲ್ಲರನ್ನೂ ಚೆಕಪ್ ಮಾಡುತ್ತಿದ್ದೆ. ಇವರು ಬೆಳಗ್ಗೆಯಿಂದ ತಿಂಡಿ, ಊಟ ಸರಿಯಾಗಿ ಮಾಡುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಯಿತು ಎಂದರು.
ಠಾಣೆಗೆ ಹೋಗಿದ್ವಿ. ಈ ವೇಳೆ ಪವಿತ್ರಾ ಗೌಡ ಬಿಪಿ ಲೋ ಇತ್ತು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಟ್ಟಿದ್ದೇವೆ, ಡ್ರಿಪ್ಸ್ ಹಾಕಲಾಗಿತ್ತು. ಗ್ಲೂಕೋಸ್ ನೀಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಉಳಿದ ಆರೋಪಿಗಳ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಅವರು ತಿಳಿಸಿದರು.
ಇನ್ನು ಚಿಕಿತ್ಸೆಯ ಬಳಿಕ ಪವಿತ್ರಾ ಗೌಡ ಅವರನ್ನು ಪೊಲೀಸರು ವಾಪಸ್ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.