ರಾಷ್ಟ್ರ ರಾಜಧಾನಿಯಲ್ಲಿ ಹೇಗಿದೆ ಮಳೆ?: ಸಿಎಂ ಕೇಜ್ರಿವಾಲ್ ಏನು ಹೇಳಿದ್ರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಈ ಹಿನ್ನೆಲೆ ಇಂದು ಶಾಲೆಗಳಿಗೆ ರಜೆ ಕೂಡ ಘೋಷಣೆ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಪ್ರವಾಹ (Flood) ಬರುವ ಸಾಧ್ಯತೆ ಇಲ್ಲ. ಅಗತ್ಯವಿದ್ದರೆ, ನಾವು ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತೇವೆ ಎಂದು ಹೇಳಿದ್ದಾರೆ.

ಯಮುನಾದಲ್ಲಿ ನೀರಿನ ಮಟ್ಟ ಈಗಾಗಲೇ ಅಪಾಯದ ಗಡಿ ದಾಟಿದೆ. ಮಧ್ಯಾಹ್ನ 204.63 ಮೀಟರ್ ತಲುಪಿದೆ. ಎಚ್ಚರಿಕೆಯ ಮಟ್ಟ 204.50 ಆಗಿದೆ. ಪ್ರವಾಹದಂತಹ ಪರಿಸ್ಥಿತಿ ಎದುರಾದರೂ ರಾಜಧಾನಿ ನಗರವನ್ನು ಎಲ್ಲದಕ್ಕೂ ಸಿದ್ಧ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಭಾರೀ ಮಳೆಯು ಜನರಿಗೆ ಸಮಸ್ಯೆಗಳನ್ನು ಉಂಟುಮಾಡಿತು. ಪ್ರತಿ ವರ್ಷ ಮಳೆಯ ನಂತರ, ಕೆಲವು ದುರ್ಬಲ ಪ್ರದೇಶಗಳು ಜಲಾವೃತವಾಗುತ್ತವೆ ಮತ್ತು ನೀರನ್ನು ಒಂದೆರಡು ಗಂಟೆಗಳಲ್ಲಿ ಹೊರಹಾಕಲಾಗುತ್ತದೆ. ಆದರೆ 153 ಮಿಮೀ ಮಳೆಯಾಗಿದ್ದು ಸುಮಾರು 40 ವರ್ಷಗಳ ನಂತರ ಈ ರೀತಿ ಮಳೆ ಬಂದಿದೆ ಎಂದು ಅವರು ಹೇಳಿದರು.

ವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಪ್ರದೇಶಗಳಲ್ಲಿ ನೀರು ಹರಿಯುತ್ತಿರುವುದು ಇದೇ ಮೊದಲು. ಕೆಲವು ರಸ್ತೆಗಳಲ್ಲಿ ಹೊಂಡಗಳಾಗಿವೆ, ಕಾರಣವನ್ನು ತಿಳಿಯಲು ನಾವು ಅಧಿಕಾರಿಗಳನ್ನು ಕೇಳಿದ್ದೇವೆ ರು. ಅಹಿತಕರ ಘಟನೆಗಳನ್ನು ತಪ್ಪಿಸಲು ರಸ್ತೆಗಳಲ್ಲಿನ ಗುಂಡಿಗಳನ್ನು ಕಲ್ಲುಗಳಿಂದ ತುಂಬಿಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ಜಲಾವೃತ ಸಮಸ್ಯೆಗಳನ್ನು ಪರಿಹರಿಸಲು ಎನ್‌ಡಿಎಂಸಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!