ಹೇಗಿದೆ ಹವಾಮಾನ? ಇಂದು ನಡೆಯುತ್ತಾ ಐಪಿಎಲ್ ಫೈನಲ್ ಮ್ಯಾಚ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಫೈನಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ನಿನ್ನೆ(ಮೇ.28) ನಿಗದಿಯಾಗಿದ್ದ ಫೈನಲ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಮೀಸಲು ದಿನವಾದ ಇಂದು(ಮೇ.29 ರೋಚಕ ಹೋರಾಟ ನಡೆಯಲಿದೆ.

ಇದರ ನಡುವೆ ಇತ್ತ ಗುಜರಾತ್, ಮಧ್ಯಪ್ರದೇಶ ಸೇರದಂತೆ ಹಲವೆಡೆ ಮಳೆಯಾಗುತ್ತಿದೆ. ಇಂದು ಕೂಡ ಗುಜರಾತ್‌ನ ಹಲವು ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ. ಫೈನಲ್ ಪಂದ್ಯ ನಡೆಯುತ್ತಿರುವ ಅಹಮ್ಮದಾಬಾದ್ ಸುತ್ತ ಮುತ್ತ ಇದುವರೆಗೂ ಮಳೆ ಸೂಚನೆ ಇಲ್ಲ. ಹೀಗಾಗಿ ಇಂದು ಒಟ್ಟು 40 ಓವರ್ ಪಂದ್ಯ ನಡೆಯುವ ಎಲ್ಲಾ ಸಾಧ್ಯತೆ ಇದೆ.

ಗುಜರಾತ್‌ನ ಮಧ್ಯ ಪಶ್ಚಿಮ ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ. ಹವಾಮಾನ ವರದಿ ಪ್ರಕಾರ ಗುಜರಾತ್‌ನ ಕೆಲೆವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಅಹಮ್ಮದಾಬಾದ್ ಹಾಗೂ ಭವನಗರ ವಲಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಆದರೆ ಪೂರ್ವ ಮುಂಗಾರು ಸೆಂಟ್ರಲ್ ವೆಸ್ಟ್‌ನಿಂದ ನಾರ್ತ್ ಈಸ್ಟ್ ಕಡೆ ಚಲಿಸುವ ಕಾರಣ ಅಹಮ್ಮದಾಬಾದ್ ಹಾಗೂ ಭವನಗರ ವಲಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಮುಂಗಾರು ಅಹಮ್ಮದಾಬಾದ್ ತಲುವ ವೇಳೆ ಮತ್ತಷ್ಟು ಕ್ಷೀಣಿಸಲಿದೆ. ಹೀಗಾಗಿ ಮಳೆ ಭಾರಿ ಮಳೆಯ ಸಾಧ್ಯತೆಗಳು ಕಡಿಮೆ ಎಂದು ವರದಿ ಹೇಳುತ್ತಿದೆ.

ಅಹಮ್ಮದಾಬಾದ್ ಸುತ್ತ ಮುತ್ತ ಪಂದ್ಯಕ್ಕೆ ಪೂರಕ ವಾತಾವರಣವಿದೆ. ಹೀಗಾಗಿ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಇಂದು ಬಹುತೇಕ ಪಂದ್ಯ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಇದೇ ಮೊದಲ ಬಾರಿಗೆ ಮೀಸಲು ದಿನದಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿದೆ. ಕಳೆದ ಎಲ್ಲಾ ಆವೃತ್ತಿಗಳು ನಿಗದಿತ ದಿನಾಂಕದಲ್ಲೇ ನಡೆದಿದೆ.

ಭಾನುವಾರ ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ನಡೆಯಬೇಕಿದ್ದ 16ನೇ ಆವೃತ್ತಿಯ ಫೈನಲ್‌ ಪಂದ್ಯಕ್ಕೆ ಭಾರಿ ಮಳೆ ಅಡ್ಡಿಯಾಗಿತ್ತು. ಸಂಜೆಯಿಂದಲೇ ಸುರಿಯಲು ಆರಂಭಿಸದ ಮಳೆಗೆ ಕ್ರೀಡಾಂಗಣ ನೀರಿನಿಂದ ತುಂಬಿತ್ತು. ಕ್ರೀಡಾಂಗಣ ಸುತ್ತ ಮುತ್ತ ಕೂಡ ನೀರು ತುಂಬಿಕೊಂಡಿತ್ತು. ರಾತ್ರಿ 11 ಗಂಟೆ ಆದರೂ ಮಳೆ ನಿಂತಿಲ್ಲ. ನಡು ನಡುವೆ ಮಳೆರಾಯ ಬ್ರೇಕ್ ನೀಡಿದ ಕಾರಣ ಅಭಿಮಾನಿಗಳು ಪಂದ್ಯ ಆರಂಭವಾಗುವ ಕನಸು ಕಂಡಿದ್ದರು. ಆದ್ರೆ ದಿಢೀರ್ ಸುರಿಯುತ್ತಿದ್ದ ಮಳೆಯಿಂದ ಅಂತಿಮವಾಗಿ ಪಂದ್ಯ ರದ್ದುಗೊಳಿಸಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!